ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಪ್ರಸಿದ್ಧ ಶ್ರೀ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವನ್ನು ಶುದ್ದೀಕರಣದ ನಂತರ ತೆರೆಯಲಾಗಿದ್ದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಪ್ರತಿ ದಿನವೂ ರಾತ್ರಿ 8:30ಕ್ಕೆ ದೇವಾಲಯನ್ನು ಮುಚ್ಚಲಾಗುತ್ತಿತ್ತು ಆದರೆ ದೇವಾಲಯದ ಬಾಗಿಲನ್ನು ಗ್ರಹಣದ ಹಿನ್ನಲೆ ಮೊನ್ನೆ ಸಂಜೆ 4:30ಕ್ಕೆ ಮುಚ್ಚಲಾಗಿತ್ತು.
ಗ್ರಹಣದ ನಂತರ ಎಂದಿನಂತೆ ಬೆಳಿಗ್ಗೆ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಶುದ್ದೀಕರಣಗೊಳಿಸಿ ದೇವರಿಗೆ ಎಂದಿನಂತೆ ಪ್ರಾತಃ ಕಾಲದ ಪೂಜೆ ಸಲ್ಲಿಸಿ ಬಳಿಕ ದೇವಾಲಯದ ಬಂದ ಭಕ್ತಾಧಿಗಳು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು.

ಘಾಟಿ ಸುಬ್ರಹ್ಮಣ್ಯ ದೇವಾಲಯ ಶುದ್ದೀಕರಣ ಮಾಡಿ, ಬಾಗಿಲು ತೆರೆದು, ದೇವರಿಗೆ ಎಂದಿನಂತೆ ಪ್ರಾತಃ ಕಾಲದ ಪೂಜೆ ಆರಂಭಮಾಡಲಾಗಿದೆ.

