ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದರೆ ಅದಿಕಾರಿಗಳು ಸ್ಪಂದಿಸಿ ಇದರ ಬಗ್ಗೆ ಪರಿಹರಿಸುವುದು ಅಧಿಕಾರಿಗಳ ಕರ್ತವ್ಯ ಅದರೆ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವುದು ಗ್ರಾಮ ಪಂಚಾಯಿತಿಯ ಕಾರ್ಮಿಕರ ಹಾಗು ಅಧಿಕಾರಿಗಳ ಕರ್ತವ್ಯ. ಊರಿನ ತ್ಯಾಜ್ಯ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವಂತಾದರೆ ಯಾವ ಸಮಸ್ಯೆಯು ಬರುವುದಿಲ್ಲ. ಆದರೆ ಇಲ್ಲಿನ ಕೆಲವು ಮೋರಿಗಳಲ್ಲಿ ಕಬ್ಬಿಣದ ಅದಿರಿನಿಂದ ವೆಲ್ಡ್ ಮಾಡಿಸಿ ಚರಂಡಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ. ಇದರಿಂದ ಚರಂಡಿಯ ತಾಜ್ಯವು ಮುಂದೆ ಸಾಗದೇ ಮನೆಗಳ ಮುಂದೆ ತಾಜ್ಯ ಮತ್ತು ತ್ಯಾಜ್ಯದ ನೀರು ನಿಂತಿದ್ದು ಸೊಳ್ಳೆ ನೊಣಗಳಿಂದ ಕೊಳಚೆ ಹೆಚ್ಚಾಗಿ ಸೋಂಕುಗಳಿಂದ ಸಾಂಕ್ರಾಮಿಕ
ರೋಗಗಳಿಗೆ ಊರಿನ ವಯಸ್ಸಾದ ವೃದ್ದರು ಮತ್ತು ಮಕ್ಕಳು ತುತ್ತಾಗುತ್ತಿದ್ದಾರೆ ಎಂದು ಹಾಡೋನಹಳ್ಳಿ ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ. ಗ್ರಾಮ ಪಂಚಾಯಿತಿಗೆ ಒಂದು ತಿಂಗಳ ಹಿಂದೆ ದೂರು ನೀಡಿದರೂ ಎನು ಪ್ರಯೋಜನವಾಗಿಲ್ಲ. ತಾಲ್ಲುಕು ಪಂಚಾಯಿತಿಯ ಕಾರ್ಯನಿರ್ವಾಹಕ ಅದಿಕಾರಿಗಳಿಗೂ ದೂರು ನೀಡಲಾಗಿದ್ದು ಆವರೂ ಯಾವುದೆ ಕ್ರಮ ತೆಗೆದುಕೊಂಡಿಲ್ಲ .

ಇದಕ್ಕೆ ಸಂಬಂದ ಪಟ್ಟ ಆಧಿಕಾರಿಗಳು ಕ್ರಮ ತೆಗೆದು ಕೊಂಡು ತೆರವುಗೊಳಿಸಿ, ಚರಂಡಿ ಮುಕ್ತವಾಗಿಸಿ, ಚರಂಡಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡದೆ ಹೋದರೆ ಪಂಚಾಯಿತಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹಾಡೋನಹಳ್ಳಿ ಗ್ರಾಮಸ್ಥರಾದ ಶ್ರೀ.ಮುನಿರಾಜು ಹೆಚ್.ವಿ.ಹಾಗು ಶ್ರೀಮತಿ.ಅನಿತ ಎಂಬುವರು ಪತ್ರಿಕೆಗೆ ತಿಳಿಸಿದ್ದಾರೆ.
“ಚರಂಡಿಯ ತುಂಬಾ ಊರಿನ ಕಸ ತ್ಯಾಜ್ಯ ತುಂಬಿಕೊಂಡಿದ್ದು ಇದನ್ನು ಸ್ವಚ್ಚಗೊಳಿಸಿ ಎಂದು ದೂರು ನೀಡಿದರೂ ಪ್ರಯೋಜನವಾಗಿಲ್ಲ .ಸ್ವಚ್ಚ ಗೋಳಿಸಿದೆ ಹೋದರೆ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಸಾಂಕ್ರಾಮಿಕವಾಗಿ ಪರಿವರ್ತನೆ ಗೊಂಡು ಗ್ರಾಮದ ಜನರು ರೋಗಕ್ಕೆ ತುತ್ತಾಗಬಹುದು ಎಂದು ಗ್ರಾಮದ ಜನರು ಭಯಭೀತರಾಗಿದ್ದಾರೆ”. ಆನಂದ್, ಗ್ರಾ. ಪಂ ಸದಸ್ಯ, ಹಾಡೋನಹಳ್ಳಿ.

