ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಿ ಗೌರವಿಸಬೇಕು-ಶಾಸಕ ಶ್ರೀನಿವಾಸ್ 

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಎನ್ ಟಿ ರವರು ಹಿರೇಹೆಗ್ಡಳ್ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಆವರಣದಲ್ಲಿ ನೂತನವಾಗಿ
ಆರಂಭಗೊಳ್ಳಲಿರುವ ವಿಜ್ಞಾನ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿ ನಾನು ಕ್ಷೇತ್ರದಲ್ಲಿ ಪ್ರಾಮುಖ್ಯತೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಹೊತ್ತು ನೀಡುವೆ ಹಾಗೂ ಅತಿ ಮುಖ್ಯವಾಗಿ ವಸತಿ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಹಾಗೂ ಮಹಿಳಾ ವಿದ್ಯಾರ್ಥಿಗಳ ಆರೋಗ್ಯವನ್ನು ಹೆಚ್ಚು ಗಮನವರಿಸಿ ಎಂದು ತಿಳಿಸಿದರು.

ವಸತಿ ಶಾಲೆಯನ್ನು ನಿರ್ಮಿಸುವ ಸಲುವಾಗಿ ಅನೇಕ ಬಾರಿ ಸಚಿವರುಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುಮೋದನೆ ಗೊಳಿಸಲಾಗಿದೆ ನಮ್ಮ ತಾಲೂಕಿನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು ತಾಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹವಾಗುತ್ತಿವೆ. ನಾವು ಇದಕ್ಕೆ ಕಡಿವಾಣ ಹಾಕಬೇಕು. ನಾವು ನೀವುಗಳಿಂದ ಸೇರಿ ಬಾಲ್ಯ ವಿವಾಹವಾಗುವುದನ್ನು ತಡೆಗಟ್ಟಿ ಮಹಿಳೆಯರನ್ನು ಉನ್ನತ ಸ್ಥಾನಕ್ಕೆ ಮತ್ತು ಕಾಲೇಜಿಗೆ ತರುವಂತೆ ಮನವೊಲಿಸಿ ಶಿಕ್ಷಣ ಮದುಗಿಸಬೇಕು ಎಂದರು.

- Advertisement - 

ಹಿಂದುಳಿದಿರುವ ತಾಲೂಕಿಗೆ ಕೊಟ್ಟ ಮಾತಿನಂತೆ ವಿಜ್ಞಾನ ಪದವಿ ಪೂರ್ವ ಕಾಲೇಜನ್ನು ನಿರ್ಮಿಸಿ ಉದ್ಘಾಟಿಸಿದ ಶಾಸಕರಾದ ಶ್ರೀನಿವಾಸ್ ರವರಿಗೆ ಧನ್ಯವಾದಗಳು ಹಾಗೂ ನಮ್ಮ ವಸತಿ ಇಲಾಖೆಯ ಪ್ರಾಂಶುಪಾಲರು ಶಿಕ್ಷಕರುಗಳು ಶಾಸಕರು ತಿಳಿಸಿದ ಹಾಗೆ ಹೆಚ್ಚಿನ ಆದ್ಯತೆ ಮಹಿಳೆಯರಿಗೆ ನೀಡಿ ಉತ್ತಮ ಶಿಕ್ಷಣದೊಂದಿಗೆ ಅವರ ಆರೋಗ್ಯಕ್ಕೆ ಮುಂಜಾಗ್ರತೆ ವಹಿಸಿದ್ದಾರೆ. ರವಿಕುಮಾರ್, ಪರಿಶಿಷ್ಟ ಪಂಗಡಗಳ ವರ್ಗಗಳ ಅಧಿಕಾರಿ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು ವಸತಿ ಶಾಲೆ ಪ್ರಾಂಶುಪಾಲರಾದ ಶೋಭಾ, ನಿಲಯ ಪಾಲಕ ಶಂಕರಪ್ಪ, ಗುಡೆಕೋಟೆ ಮುರಾರ್ಜಿ ವಸತಿ ಶಾಲೆಯ ನಿಲಯ ಪಾಲಕ ಮಧು ಕುಮಾರ್ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲಾ ಅಧಿಕಾರಿಗಳು ವಿದ್ಯಾರ್ಥಿಗಳು ಇದ್ದರು.

- Advertisement - 

 

Share This Article
error: Content is protected !!
";