ಚಂದ್ರವಳ್ಳಿ ನ್ಯೂಸ್, ತುಮಕೂರು:
ಹರಿಯಬ್ಬೆ ಎಸ್.ಪಿ ಭಾರ್ಗವಿ ಶ್ರೀಧರಶೆಟ್ಟಿ ಇವರು ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ರೋಟರಿ ತುಮಕೂರು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 2020-2021ರಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆದ ಭಾರ್ಗವಿ ಅವರು ನಾಲ್ಕು ವರ್ಷಗಳ ಪದವಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಇಡೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿಗೆ ಕೀರ್ತಿ ತಂದಿರುವುದಲ್ಲದೆ ರೋಟರಿ ತುಮಕೂರು ಚಿನ್ನದ ಪದಕಕ್ಕೆ ಭಾಜನಾರಾಗಿದ್ದಾರೆ.
ಸಾಧಕಿ ಭಾರ್ಗವಿ ಎಸ್.ಪಿ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಸಿ.ಶ್ರೀಧರಶೆಟ್ಟಿ ಮತ್ತು ಪದ್ಮಾವತಮ್ಮ ಇವರ ಪುತ್ರಿಯಾಗಿದ್ದಾರೆ.

ಶ್ರೀಯುತರ ಸಾಧನೆಗೆ ಹರಿಯಬ್ಬೆ ಗ್ರಾಮಸ್ಥರು, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲಕರು, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ವಿದ್ಯಾರ್ಥಿನಿ ಭಾರ್ಗವಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

