ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಇಲ್ಲಿನ ವಾಸವಿ ವಿದ್ಯಾವರ್ಧಕ ಸಂಘ, ರೋಟರಿ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್ ಮತ್ತು ಲಕ್ಷ್ಮಿ ಸರ್ಜಿಕಲ್ ಟ್ರಾಮಾ ಆರ್ಥೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಣೆಬೆನ್ನೂರು ಹಾಗೂ ಶ್ರೀ ಲಕ್ಷ್ಮಿ ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿ ಸೇವಾ ಸಂಸ್ಥೆ ರಾಣಿಬೆನ್ನೂರು ಇವರ ಸಂಯುಕ್ತ ಆಶ್ರಯದಲ್ಲಿ
ಇದೇ ಸೆಪ್ಟೆಂಬರ್-13ರ ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಿರಿಯೂರಿನ ಲಕ್ಕವನಹಳ್ಳಿ ರಸ್ತೆ ಬಳಿ ಇರುವ ವಾಗ್ದೇವಿ ವಿದ್ಯಾ ಸಂಸ್ಥೆ ಆವರಣದಲ್ಲಿ ಮೊಣಕಾಲು ನೋವು ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರ ಚಿಕಿತ್ಸೆಗಾಗಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಲಯನ್ಸ್ ಐ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ವಿ.ಅಮರೇಶ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಖ್ಯಾತ ಚಪ್ಪೆ ಬದಲಾವಣೆ ಮತ್ತು ಮೊಳಕಾಲು ಚಿಪ್ಪು ಬದಲಾವಣೆ ತಜ್ಞ ಡಾ.ಸಂಜೀವ ಎಂ ಮುದ್ರಿ ಅವರಿಂದ ತಪಾಸಣೆ ನಡೆಸಲಾಗುವುದು.
ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಸಂತ್ರಸ್ತರು ಪಡೆದುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕ ಕೆ.ವಿ ಅಮರೇಶ್ ರವರು ಮನವಿ ಮಾಡಿದ್ದಾರೆ.

