ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಿಬ್ಬಂದಿ ಇಲ್ಲದ ಪಶು ವೈದ್ಯಕೀಯ ಆಸ್ಪತ್ರೆ ದಿಂಡಾವರ ಹಾಗೂ ಯಲ್ಲದ ಕೆರೆ ಕಲ್ವಳ್ಳಿ ಭಾಗದ ಗೌಡನಹಳ್ಳಿಯಿಂದ ಕೊಟ್ಟಗೇರ ಹಟ್ಟಿ ವರೆಗೂ ಸುಮಾರು 30 ಗ್ರಾಮಗಳಿದ್ದು ಕುರಿ ಮೇಕೆ ಗಳು ಸೇರಿದಂತೆ ಸುಮಾರು 70 ಸಾವಿರ ಜಾನುವಾರುಗಳು ಇದ್ದು ಇಲ್ಲಿ ಡಿ ಗ್ರೂಪ್ ನೌಕರ ಒಬ್ಬರನ್ನ ಹೊರೆತುಪಡಿಸಿದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಪಶು ವೈದ್ಯಕೀಯ ಇನ್ಸ್ಪೆಕ್ಟರ್ ರವರನ್ನು ದಿಂಡಾವರದಿಂದ ಈಶ್ವರಗೆರೆ ವರ್ಗಾವಣೆ ಮಾಡಿದ್ದಾರೆ.
ಅದೇ ರೀತಿ ಯಲ್ಲದಕೆರೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಇನ್ಸ್ಪೆಕ್ಟರ್ ಇಬ್ಬರನ್ನು ಟ್ರಾನ್ಸ್ಫರ್ ಮಾಡಲಾಗಿದೆ. ಅಲ್ಲಿಯೂ ಸಹ ಡಿ ಗ್ರೂಪ್ ನೌಕರರು ಒಬ್ಬರಿದ್ದಾರೆ.
ಡಿ ಗ್ರೂಪ್ ನೌಕರರಿಗೆ ಎಷ್ಟು ಜ್ಞಾನ ಇರುತ್ತದೆ ಎನ್ನುವುದು ಪ್ರಶ್ನೆಯಾಗಿದೆ. ದಿಂಡಾವರ ಪಶು ವೈದ್ಯಕೀಯ ಆಸ್ಪತ್ರೆಯನ್ನು ಅಪ್ಗ್ರೇಡ್ ಮಾಡಿ ಇಲ್ಲಿಗೆ ಒಬ್ಬರು ವೈದ್ಯಾಧಿಕಾರಿಗಳು ಹಾಗೂ ಇನ್ಸ್ಪೆಕ್ಟರ್ ರವರನ್ನು ಕೂಡಲೇ ಹಾಕಿಕೊಡಬೇಕು.
ನಮ್ಮ ಕ್ಷೇತ್ರದಲ್ಲಿ ನಮ್ಮದೇ ಎಂಎಲ್ಎ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಸಹ ನಮ್ಮ ಕಲ್ಲವಳ್ಳಿ ಭಾಗ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಜಗತ್ ಜಾಹಿರವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ನಮಗೆ ಎರಡು ಪಶು ವೈದ್ಯಕೀಯ ಆಸ್ಪತ್ರೆಗೆ ಕಾಯಂ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಬೇಕೆಂದು ಭಾರತೀಯ ಕಿಸಾನ್ ಸಂಘದ ಹಿರಿಯೂರು ಘಟಕದ ಕಾರ್ಯದರ್ಶಿ ಚಂದ್ರಗಿರಿ ಡಿ ಮನವಿ ಮಾಡಿದ್ದಾರೆ.

