ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಹಿರಿಯೂರು ತಾಲೂಕಿನ ದೊಡ್ಡಕಟ್ಟೆ ಗ್ರಾಮದ ನಿವೃತ್ತ ಸೈನಿಕ ರಾಜ ಮಾಣಿಕ್ಯಮ್ ಅವರು ನಿಧನರಾಗಿದ್ದಾರೆ.
ಶ್ರೀಯುತರು ಇಂಡಿಯನ್ ಏರ್ ಫೋರ್ಸ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಹೊಂದಿ ದೊಡ್ಡಕಟ್ಟೆ ಗ್ರಾಮದಲ್ಲಿ ನೆಲೆಸಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.
ನಿಧನದ ಸುದ್ದಿ ತಿಳಿದ ತಕ್ಷಣ ಗ್ರಾಮದ ಬಂಧುಗಳು ಸೇರಿದಂತೆ ಅನೇಕರು ಅವರ ಮನೆಗೆ ಧಾವಿಸಿ, ಸಂತಾಪ ಸೂಚಿಸಿ, ಮೃತರ ಅಂತಿಮ ದರ್ಶನ ಪಡೆದರು.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಗಣ್ಯರು, ರಾಜಕೀಯ ಮುಖಂಡರು, ಗ್ರಾಮಸ್ಥರು ರಾಜ ಮಾಣಿಕ್ಯಮ್ ರವರ ನಿಧನವು ನಮಗೆ ಅತ್ಯಂತ ನೋವನ್ನುಂಟುಮಾಡಿದೆ ಎಂದರಲ್ಲದೆ, ಅವರ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ ಎಂದು ಸಂತಾಪ ಸೂಚಿಸಿದರು.

