ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಪಾನ್‌ನ ಕೈಗಾರಿಕಾ ಸೇವಾ ದಿಗ್ಗಜ Konoike ಜೊತೆ ಅರ್ಥಪೂರ್ಣ ಸಭೆ! ಮಾಡಿ ಚರ್ಚಿಸಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಉಕ್ಕು ಇಂಜಿನಿಯರಿಂಗ್ ಹಾಗೂ ಮೂಲಸೌಕರ್ಯದಲ್ಲಿ ಪರಿಣತಿ ಹೊಂದಿರುವ #Konoike ಸಂಸ್ಥೆಯ ಪ್ರಮುಖರೊಂದಿಗೆ ಅರ್ಥಪೂರ್ಣ ಸಭೆ ನಡೆಸಲಾಯಿತು. ಸಂಸ್ಥೆಯು “ಭಾರತವನ್ನು ಎರಡನೇ ವ್ಯವಹಾರ ಮನೆ ಮಾಡೋಣ” ಎಂಬ ಕನಸು ಹೊಂದಿದೆ. ಇದು ಕರ್ನಾಟಕದ ಬೆಳವಣಿಗೆಯ ದೃಷ್ಟಿ ಕೋನಕ್ಕೆ ಹೊಂದಿಕೆಯಾಗುತ್ತದೆ.
ಭಾರತದಲ್ಲಿ ಸ್ಥಳೀಯ ಕಂಪನಿಗಳೊಂದಿಗೆ ಕೆಲಸ ಮಾಡಲು Konoike ಆಸಕ್ತಿ ತೋರಿದ್ದು, ಅವರಿಗೆ ಕರ್ನಾಟಕವೇ ಸೂಕ್ತ ಕೇಂದ್ರವೆಂದು ಪರಿಚಯಿಸಿದೆವು. ಭಾರತ ಮೂಲದ ಇಂಜಿನಿಯರಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದು, ಇದಕ್ಕಾಗಿ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು.

