ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲ್ಯ ವಿವಾಹ ತಡೆಯುವ ಸಲುವಾಗಿ ಸಮಾಜದಲ್ಲಿ ಅರಿವು ಮೂಡಿಸಲು ಚಿತ್ರದುರ್ಗದ ಹೊರಪೇಟೆಯ ಬಿಲಾಲ್ ಮಸೀದಿಯಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಸೀದಿಯ ಇಮಾಮ್ ರಾಧಾ ಅಬ್ದುಲ್ ಖಾಲಿಕ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಈ ಕಾರ್ಯಕ್ರಮವನ್ನು ಆಶ್ರಿತಾ ಎನ್.ಜಿ.ಒ ಸಮಾಜ ಸೇವೆ ಸಂಸ್ಥೆಯಿಂದ ನಡೆಸಲಾಯಿತು. ಸಮಾಜದ ಮುಖಂಡರು ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

