ಪೋಥಿಸ್ ಬಟ್ಟೆ ಶೋ ರೂಮ್​​ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಪೋಥಿಸ್ ಬಟ್ಟೆ ಶೋ ರೂಮ್​​ ಮೇಲೆ ಶುಕ್ರವಾರ ಬೆಳಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರು ರಸ್ತೆಯ ಟಿಂಬರ್ ಲೇಔಟ್​ನಲ್ಲಿರುವ ಪೋಥಿಸ್​ ಶೋ ರೂಮ್​ಗೆ 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಬೆಳಿಗ್ಗೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

- Advertisement - 

ಇದೇ ಸಂದರ್ಭದಲ್ಲಿ ಗಾಂಧಿನಗರದ ಪೋಥಿಸ್​ ಶೋ ರೂಮ್ ಮೇಲೂ ದಾಳಿ ಮಾಡಲಾಗಿದೆ. ಪೋಥಿಸ್ ಮಳಿಗೆ ತಮಿಳುನಾಡು ಮೂಲದ ಉದ್ಯಮಿಗೆ ಸೇರಿದ್ದಾಗಿದ್ದು, ಹೀಗಾಗಿ ಚೆನ್ನೈಯಿಂದಲೇ ಐಟಿ ಅಧಿಕಾರಿಗಳು ಬಂದಿದ್ದಾರೆ.

ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದ ಪೋಥಿಸ್ ಬಟ್ಟೆ ಮಳಿಗೆಯ ಶೋ ರೂಮ್​ಗಳು ಬೆಂಗಳೂರು, ತಮಿಳುನಾಡು ಸೇರಿ ಹಲವು ಕಡೆ ತಲೆ ಎತ್ತಿದ್ದವು.

- Advertisement - 

 

 

Share This Article
error: Content is protected !!
";