ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ 80-100 ದಶಲಕ್ಷ US ಡಾಲರ್ ಹೂಡಿಕೆ ದೃಢಪಡಿಸಿದ ಹೊಸೋಡಾ ಹೋಲ್ಡಿಂಗ್ಸ್! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ನಮ್ಮ ಜಪಾನ್ ಪ್ರವಾಸ ಯಶಸ್ವಿಯಾಗಿ ಮುಂದುವರೆದಿದ್ದು ಈ ದಿನ ಹೊಸೋಡಾ ಹೋಲ್ಡಿಂಗ್ಸ್ ನ ಪ್ರಮುಖರೊಂದಿಗೆ ನಡೆಸಿದ ಮಾತುಕತೆ ಸಫಲವಾಗಿದೆ. ಅವರು ಟಾಂಗ್ ಟಾರ್ ಎನರ್ಜಿ ಸೊಲ್ಯೂಶನ್ಸ್ – TTES ಜೊತೆಗೆ, ಕರ್ನಾಟಕದಲ್ಲಿ 80–100 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ದೃಢಪಡಿಸಿದರು ಎಂದು ಪಾಟೀಲ್ ತಿಳಿಸಿದರು.
ಈ ಯೋಜನೆಯಿಂದ ಸೌರ ಸೆಲ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, ಸುಮಾರು 500 ನೇರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಹಾಗೂ ನಮ್ಮ ಶುದ್ಧ ಇಂಧನ ಪರಿಸರ ಮತ್ತಷ್ಟು ಬಲಗೊಳ್ಳಲಿದೆ.
ಘಟಕ ಸ್ಥಾಪನೆಗೆ ಬೇಕಾದ ಭೂಮಿ, ಅವಶ್ಯಕ ಸೌಲಭ್ಯಗಳು ಮತ್ತು ಸಿಂಗಲ್-ವಿಂಡೋ ಅನುಮತಿಗಳವರೆಗೂ ಪ್ರತಿಯೊಂದು ಹಂತದಲ್ಲೂ ಸಹಕಾರ ನೀಡುವುದಾಗಿ ಹೊಸೋಡಾಗೆ ಭರವಸೆ ನೀಡಿದ್ದೇವೆ.
ನವೀಕರಿಸಬಹುದಾದ ಇಂಧನ ವೃದ್ಧಿಯನ್ನು ಮುನ್ನಡೆಸುವಲ್ಲಿ ಕರ್ನಾಟಕದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

