ಕರ್ನಾಟಕದಲ್ಲಿ ಕ್ರೀಡಾ ಉಪಕರಣಗಳ ಉತ್ಪಾದನಾ ಘಟಕ ಸ್ಥಾಪನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇನಬಟಾ(INABATA) ಸಂಸ್ಥೆ ವತಿಯಿಂದ ಕರ್ನಾಟಕದಲ್ಲಿ ಕ್ರೀಡಾ ಉಪಕರಣಗಳ ಉತ್ಪಾದನಾ ಘಟಕ ಸ್ಥಾಪನೆ ಆಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

130 ವರ್ಷಗಳ ಇತಿಹಾಸ ಹೊಂದಿರುವ ಜಪಾನ್ ನ ಸುಮಿತೊಮೊ ಕೆಮಿಕಲ್ ನ ಅಂಗ ಸಂಸ್ಥೆಯಾಗಿರುವ ಇನಬಟಾ ಟ್ರೇಡಿಂಗ್ ಗ್ರೂಪ್ನ ಪ್ರಮುಖರೊಂದಿಗೆ ಫಲಪ್ರದ ಮಾತುಕತೆ ನಡೆಸಿದೆವು.

- Advertisement - 

2027ರೊಳಗೆ ನಮ್ಮ ರಾಜ್ಯದಲ್ಲಿ ಕ್ರೀಡಾ ಉಪಕರಣಗಳಿಗೆ ಅಗತ್ಯವಿರುವ ವಸ್ತುಗಳು ಹಾಗೂ ಉತ್ಪನ್ನಗಳ ತಯಾರಿಕೆ ಮಾಡುವ ಯೋಜನೆಯನ್ನು ಅವರು ದೃಢಪಡಿಸಿದರು.

ಅವರ ಹೂಡಿಕೆ ಮತ್ತು ಭಾರತ ಪ್ರವೇಶವನ್ನು ಶೀಘ್ರಗೊಳಿಸಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು.

- Advertisement - 

 

 

Share This Article
error: Content is protected !!
";