ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಭಿವೃದ್ಧಿಯ ಹರಿಕಾರ- ದೂರದೃಷ್ಟಿಯ ನಾಯಕ ಕುಮಾರಣ್ಣ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ 2007-08 ರ ಕನಸಿನ ಯೋಜನೆ ಲಂಡನ್ ನಗರದ ಥೇಮ್ಸ್ ನದಿ ಮಾದರಿಯಲ್ಲಿ ರಾಮನಗರದ ಅರ್ಕಾವತಿ ನದಿ ದಡ ಅಭಿವೃದ್ಧಿ.
ಅಂದು ರಾಮನಗರ – ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅರ್ಕಾವತಿ ನದಿ ದಡ ಅಭಿವೃದ್ಧಿಯ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕುಮಾರಣ್ಣನವರು 2018ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಯೋಜನೆ ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆ ನೀಡಲಾಗಿತ್ತು. ಈಗ 156 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಆಗುತ್ತಿದೆ ಎಂದು ನಿಖಿಲ್ ತಿಳಿಸಿದ್ದಾರೆ.
ರಾಮನಗರದ ಅರ್ಕಾವತಿ ನದಿ ನಗರದ ಮಧ್ಯ ಭಾಗದಲ್ಲಿ ಸುಮಾರು 4 ರಿಂದ 5 ಕಿ.ಮೀ ಉದ್ದ ಹರಿಯಲಿದ್ದು, ಇದರಲ್ಲಿ ನದಿಯ ಎಡ ಭಾಗದಲ್ಲಿ ಸುಮಾರು 1.75 ಕಿ.ಮೀ ಹಾಗೂ ಬಲ ಭಾಗದಲ್ಲಿ 1.75 ಕಿ.ಮೀ ಸೇರಿ ಒಟ್ಟಾರೆ 3.50 ಕಿಲೋ ಮೀಟರ್ ಉದ್ದಕ್ಕೆ ಸೈಡ್‌ವಾಲ್ ನಿರ್ಮಾಣವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

