ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡಿನ ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆ ಆರಂಭಕ್ಕೂ ಮುನ್ನ ಬಿಜೆಪಿ ಯುವ ನಾಯಕ ಬಿ.ಸಿ ಹನುಮಂತೇಗೌಡ ಅವರು ಹಿಂದೂ ಮಹಾಗಣಪತಿಯ ಮುಕ್ತಿ ಭಾವುಟವನ್ನು ದಾಖಲೆ ಮೊತ್ತಕ್ಕೆ ಹರಾಜ್ ನಲ್ಲಿ ಕೂಗಿ ಪಡೆಯುವ ಮೂಲಕ ಕೋಟೆ ನಾಡು ಚಿತ್ರದುರ್ಗಕ್ಕೆ ಹೊಸದೊಂದು ಸಂದೇಶವನ್ನು ಗೌಡರು ರವಾನೆ ಮಾಡಿದ್ದಾರೆ.
ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಡೆಯುವಂತೆ ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆ ಅಂಗವಾಗಿ ಭಗವಾಧ್ವಜ, ಹೂವಿನ ಹಾರ ಹಾಗೂ ಪ್ರತಿಕೃತಿ ಹರಾಜು ಮಾಡಲಾಯಿತು.
ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ಯುವ ನಾಯಕ ಬಿ.ಸಿ ಹನುಮಂತೇಗೌಡ ಅವರು ಭಗವಾ ಧ್ವಜವನ್ನು 6 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ಐಶ್ವರ್ಯಾ ಗ್ರೂಪ್ ಕಿರಣ್ ಕುಮಾರ್ ಅವರು ಗಣಪತಿಯ ಫಲಾಹಾರವನ್ನು 1.25 ಲಕ್ಷ ರೂ.ಗಳಿಗೆ ಪಡೆದುಕೊಂಡರು. ಕಲಾಕೃತಿಯನ್ನು ಮಂಜುನಾಥ್ ಎಂಬುವವರು ಕೈಯಲ್ಲಿ ರಚಿಸಿರುವ ಗಣಪತಿ 1.05 ಲಕ್ಷ ರೂ.ಗಳಿಗೆ ಪಡೆದುಕೊಂಡರು. ಚಿತ್ರಹಳ್ಳಿ ಲವಕುಮಾರ್ ಅವರು ಗಣಪತಿಯ ಹೂವಿನ ಹಾರವನ್ನು 1 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು. ಶೋಭಾಯಾತ್ರೆ ಮಧ್ಯಾಹ್ನ 2.30ಕ್ಕೆಚಾಲನೆ ಪಡೆದುಕೊಂಡಿತು.
ಶೋಭಾಯಾತ್ರೆಯ ಅಂಗವಾಗಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು, ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಶ್ರೀ, ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಶೋತ್ತಮಾನಂದ ಶ್ರೀ,

ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಸರ್ದಾರ್ ಸೇವಾಲಾಲ್ ಶ್ರೀ, ಬಸವ ಮಾಚಿದೇವ ಶ್ರೀ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಉದ್ಯಮಿ ಹಾಗೂ ಬಿಜೆಪಿ ಮುಖಂಡ ಡಾ.ಸಿದ್ದಾರ್ಥ್, ಚಂದ್ರಶೇಖರ್, ಷಡಾಕ್ಷರಪ್ಪ, ಟಿ.ಬದರೀನಾಥ್, ಡಾ.ಮಂಜುನಾಥ್, ಗಣಪತಿ ಇತರರಿದ್ದರು.

