ಕನ್ನಡ ಜಾಗೃತಿ ಸಮಿತಿಗೆ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಸೇರಿ ಐವರ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಅಧಿಕಾರೇತರ ಸದಸ್ಯರ ಕನ್ನಡ ಜಾಗೃತಿ ಸಮಿತಿ ರಚಿಸಿದೆ.
  

ಚಿತ್ರದುರ್ಗ ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್, ಚಳ್ಳಕೆರೆ ಎಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ, ಮೊಳಕಾಲ್ಮೂರು ತಾಲ್ಲೂಕು ರಾಂಪುರದ ಡಾ.ಎಂ.ವೇದಾಂತ್, ಹೊಳಲ್ಕೆರೆಯ ಶಶಿಕುಮಾರ್ ಬಾಲು ನೇಮಕವಾಗಿದ್ದಾರೆ.

- Advertisement - 

 ರಾಜ್ಯದ 31 ಜಿಲ್ಲೆಗಳಿಗೆ ತಲಾ 5 ಸದಸ್ಯರಂತೆ 155 ಸದಸ್ಯರು, 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಲಾ 6 ರಂತೆ 66 ಸದಸ್ಯರು ಹಾಗೂ ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ

- Advertisement - 

ಸದಸ್ಯರು ಸೇರಿದಂತೆ ರಾಜ್ಯದಾದ್ಯಂತ 249 ಕನ್ನಡ ಜಾಗೃತಿ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 

 

 

Share This Article
error: Content is protected !!
";