ಕುರುಬರ ಕಾಲೋನಿಯ ಚರಂಡಿ ಸ್ವಚ್ಛತೆಗೊಳಿಸಿ

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
 ಭಾರತ ದೇಶದಲ್ಲಿ ಸ್ವಚ್ಛತೆ ಬಹು ಮುಖ್ಯವಾದದ್ದು. ವೈಯಕ್ತಿಕ, ಸುತ್ತ ಮುತ್ತಲಿನ ಪರಿಸರ ಸ್ವಚ್ಛಗೊಳಿಸದಿದ್ದರೆ ಹಲವು ಸಾಂಕ್ರಾಮಿಕ ರೋಗಗಳು ಹರಡಿ ನಾನಾ ರೀತಿಯ ರೋಗವನ್ನು ತರಲಿದೆ.

ಕಟ್ಟಿರುವ ಚರಂಡಿ ಸ್ವಚ್ಛಗೊಳಿಸಿ ಎಂದು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಸಾಂಕ್ರಾಮಿಕ ರೋಗಗಳಿಗೆ ಸಾರ್ವಜನಿಕರು ತುತ್ತಾಗುವ ಆತಂಕದಲ್ಲಿದ್ದಾರೆ.

- Advertisement - 

ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಲೋಕಿಕೆರೆ ಗ್ರಾಮದ ಕುರುಬರ ಕಾಲೋನಿಯ ಚರಂಡಿಯಲ್ಲಿ ಘನ ರೂಪದ ಕಲ್ಲು ಮತ್ತು ಮರಳು ತುಂಬಿ ಗಿಡಗಂಟೆಗಳು ಬೆಳೆದಿರುವುದರಿಂದ ಚರಂಡಿ ನೀರು ಸರಾಗವಾಗಿ ಮುಂದಕ್ಕೆ ಹೋಗದೆ ನಿಂತಲ್ಲಿ ನಿಂತು ಕ್ರಿಮಿಕೀಟಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ.

- Advertisement - 

ಇದರಿಂದಾಗಿ ಅಕ್ಕ-ಪಕ್ಕದ ಮನೆಗಳ ನಿವಾಸಿಗಳು ದುರ್ವಾಸನೆಯಲ್ಲಿ ಜೀವಿಸ ಬೇಕಾದ ಸಂದರ್ಭ ಉಂಟಾಗಿದೆ ಆದಷ್ಟು ಬೇಗನೆ ಬ್ಲಾಕ್ ಆಗಿರುವ ಚರಂಡಿ ಸ್ವಚ್ಛಗೊಳಿಸಿ ಚರಂಡಿ ನೀರು ಮುಂದಕ್ಕೆ ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರ ಉಂಟಾಗದಂತೆ ತಡೆಗಟ್ಟಬಹುದಾಗಿದೆ ಎಂದು ಸಿ ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಗ್ರಾ. ಪಂ. ಸ್ವಚ್ಛತೆಗೆಂದು ಸಾಕಷ್ಟು ಅನುದಾನ ಬರುತ್ತದೆ ಆದರೂ ಸಹ ಕುರುಬರ ಕಾಲೋನಿಯ ಚರಂಡಿಯನ್ನು ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿದ್ದಾರೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ.
ಲಕ್ಕಜ್ಜಿ ರಾಮಾಂಜಿನಿ, ಕುರುಬರ ಕಾಲೋನಿ, ಮುಖಂಡ.

ನನ್ನ ಗಮನಕ್ಕೆ ಬಂದಿರುವುದಿಲ್ಲ ಈಗ ನನ್ನ ಗಮನಕ್ಕೆ ಬಂದಿದೆ ಒಂದು ಅಥವಾ ಎರಡು ದಿನಗಳಲ್ಲಿ ಸ್ವಚ್ಛತೆಗೊಳಿಸಲಾಗುವುದು”.
ಶ್ರೀನಿವಾಸ್, ಪಿಡಿಒ, ಜುಮ್ಮೋಬನಹಳ್ಳಿ, ಗ್ರಾಪಂ.  

 

Share This Article
error: Content is protected !!
";