ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಸಿರು ಇಂಧನದ ಶಕ್ತಿ ಕೇಂದ್ರವಾಗುವತ್ತ ಕರ್ನಾಟಕ ದಾಪುಗಾಲು ಇಟ್ಟಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ನಮ್ಮ ಸರ್ಕಾರ ರೂಪಿಸಿರುವ ಹೂಡಿಕೆ ಸ್ನೇಹಿ ಪರಿಸರ ಮತ್ತು ಹೊಸ ಇವಿ ನೀತಿಯ ಪರಿಣಾಮ, ಜಪಾನ್ನ ಗ್ರೀನ್ ಎನರ್ಜಿ ಕಂಪನಿಗಳು ಕರ್ನಾಟಕವನ್ನು ತಮ್ಮ ಹೂಡಿಕೆಯ ಮೊದಲ ಆದ್ಯತೆಯಾಗಿಸಿಕೊಂಡಿವೆ.
ಹೊಸಾಡಾ ಹೋಲ್ಡಿಂಗ್ಸ್ 882 ಕೋಟಿ ಹೂಡಿಕೆ ಮೂಲಕ ಸೌರಕೋಶ ತಯಾರಿಕಾ ಘಟಕ ಸ್ಥಾಪಿಸಲಿದೆ. ಹೋಂಡಾ 600 ಕೋಟಿ ಹೂಡಿಕೆ ಮಾಡಿ ಕೋಲಾರದಲ್ಲಿ ಇಲೆಕ್ಟ್ರಿಕ್ ಟೂ-ವೀಲರ್ ಘಟಕವನ್ನು ನಿರ್ಮಾಣ ಮಾಡುತ್ತಿದೆ.
ಈ ಬೃಹತ್ ಹೂಡಿಕೆಗಳು ನಮ್ಮ ಸರ್ಕಾರದ ದೃಢಸಂಕಲ್ಪದ ಫಲವಾಗಿದ್ದು, ಸಾವಿರಾರು ಉದ್ಯೋಗ ಸೃಷ್ಟಿಸುವುದರ ಜೊತೆಗೆ ಕರ್ನಾಟಕವನ್ನು ಹಸಿರು ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ದಿಕ್ಕಿನಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಸಚಿವ ಪಾಟೀಲ್ ಹೇಳಿದರು.

