ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾದ ಕರ್ನಾಟಕದ ಶ್ರೀಮತಿ ದೀಪಿಕಾ ಅವರಿಗೆ ಮತ್ತು ತಂಡಕ್ಕೆ ಆಯ್ಕೆಯಾದ ಕಾವ್ಯ ವಿ ಮತ್ತು ಕಾವ್ಯ ಎನ್ .ಆರ್ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನವೆಂಬರ್ 11 ರಿಂದ 25ರ ವರೆಗೆ ನಡೆಯಲಿರುವ ಮೊದಲ ಮಹಿಳಾ ಅಂಧರ T20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಮ್ಮ ಭಾರತೀಯ ತಂಡಕ್ಕೆ ಈ ಐತಿಹಾಸಿಕ ಪಂದ್ಯಾವಳಿಯಲ್ಲಿ ಉತ್ತಮ ಯಶಸ್ಸು ದೊರೆಯಲಿ ಎಂದು ನಿಖಿಲ್ ಅವರು ಶುಭ ಹಾರೈಸಿದ್ದಾರೆ.

