ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀ ರಾಘವೇಂದ್ರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ 2024–25 ನೇ ಸಾಲಿನ ಎಂಟನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಆರ್ ಬಿ ಎನ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಆಡಳಿತ ಮಂಡಳಿಯ ಸದಸ್ಯರು, ಷೇರುದಾರರು ಭಾಗವಹಿಸಿದ್ದ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ನಂತರ ಸಹಕಾರಿಯ ಅಧ್ಯಕ್ಷ ಖಂಡೇನಹಳ್ಳಿ ಜಿ. ಹನುಮಂತರಾಯಪ್ಪ ಮಾತನಾಡಿ 2024–25 ನೇ ಸಾಲಿನಲ್ಲಿ ನಾಲ್ಕು ಕೋಟಿ ತೊಂಬತ್ತೈದು ಲಕ್ಷ ಹದಿನೈದು ಸಾವಿರ 193 ರೂಗಳ ವಹಿವಾಟು ನಡೆದಿದ್ದು 87 ಲಕ್ಷ 57000 570 ರೂ.ಗಳ ಸಾಲ ಕೊಟ್ಟಿದ್ದೇವೆ. 24 25 ನೇ ಸಾಲಿನಲ್ಲಿ ಒಟ್ಟು ಮೂರು ಲಕ್ಷ 33000 859ರುಗಳ ಲಾಭವನ್ನು ಗಳಿಸಿದೆ ಎಂದು ಅವರು ತಿಳಿಸಿದರು.
ಸಹಕಾರಿಗಳ ಸೇವಾ ಸೌಲಭ್ಯ ಕಟ್ಟ ಕಡೆಯ ವ್ಯಕ್ತಿಗೂ ತಲುಪಿ ಅವರನ್ನು ಆರ್ಥಿಕವಾಗಿ ಮೇಲುತ್ತಬೇಕು ಮತ್ತು ಒಬ್ಬ ಸಾಲಗಾರ ಕಟ್ಟುವ ಸಾಲ ಮತ್ತೊಬ್ಬರಿಗೆ ಅನುಕೂಲವಾಗಲಿ ಎನ್ನುವ ಮನೋಭಾವ ಪ್ರತಿಯೊಬ್ಬ ಸದಸ್ಯರಲ್ಲೂ ಇರಬೇಕು ಎಂದು ತಿಳಿಸಿದರು.
ಒಟ್ಟಿನಲ್ಲಿ ಈ ಸಹಕಾರಿಯು ಸಹಕಾರಿಯ ಅಧಿನಿಯಮಗಳಿಗೆ ಎಲ್ಲಿಯೂ ಲೋಪ ಬಾರದ ರೀತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಸಹಕಾರಿಯಲ್ಲೇ ಸಾಲ ಸೌಲಭ್ಯ, ಚೆಕ್ ನಗದೀಕರಣ, ಯಶಸ್ವಿನಿ ಸೌಲಭ್ಯ, ಸಾಲ ಪಡೆದ ವ್ಯಕ್ತಿಗಳಿಗೆ ವಿಮಾ ಸೌಲಭ್ಯ ನೀಡಲಾಗಿದೆ. ಪ್ರತಿ ವರ್ಷದಂತೆ ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ಪುಸ್ತಕ ವಿತರಣೆ ಮಾಡಲಾಗಿದೆ. ಉತ್ತಮ ರೀತಿಯಲ್ಲಿ ವ್ಯವಹಾರ ಮಾಡುವ ಸದಸ್ಯರಿಗೆ ಸನ್ಮಾನ ಕೂಡಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹನುಮಂತಪ್ಪ, ಪದಾಧಿಕಾರಿಗಳಾದ ಕುಮಾರಸ್ವಾಮಿ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

