ಕೃಷಿ ಬ್ಯಾಂಕ್‌ ರೈತರ ಬೆನ್ನೆಲುಬು-ಆರ್.ಸಿ.ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿರುವ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್
11,903 ಸದಸ್ಯರನ್ನು ಹೊಂದಿದೆ. -ವಿವಿಧ ಬೆಳೆಗಳನ್ನು ಬೆಳೆಯಲು ರೈತರಿಗೆ ಆರ್ಥಿಕವಾಗಿ ಊರುಗೋಲಾಗಿ ಕೆಲಸ ಮಾಡುತ್ತ ಬಂದಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಸಿ.ಶಿವಕುಮಾರ್ ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ವತಿಯಿಂದ ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರೈತರ ಅಭಿನಂದನ ಸಭೆಯಲ್ಲಿ ಮಾತನಾಡಿ ಸಾಲ ಕೃಷಿಗೆ ಪೂರಕವಾಗಿರುವ ಕೋಳಿ ಸಾಕಾಣಿಕೆಯಿಂದ ಮೊದಲುಗೊಂಡು ದ್ರಾಕ್ಷಿ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಬೆಳಿಗಳಿಗೂ ರೈತರಿಗೆ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ₹1.35 ಕೋಟಿ ವಿವಿಧ ರೀತಿಯ ಸಾಲವನ್ನು ರೈತರಿಗೆ ನೀಡಲಾಗಿದೆ. ರೈತರು ಪಡೆದ ಬೆಳೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಇತರೆ ರೈತರಿಗೂ ಸಾಲ ಸೌಲಭ್ಯ ನೀಡಲು ಸಹಕಾರಿಯಾಗಲಿದೆ. ಅಲ್ಲದೆ ಸಾಲ ಪಡೆದ ರೈತರಿಗು ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.

- Advertisement - 

ಸರ್ಕಾರ ರೈತರ ಬೆಳೆ ಸಾಲ ಹಾಗೂ ಬಡ್ಡಿ ಮನ್ನಾ ಮಾಡುವಾಗ ಸಹಕಾರಿ ಕ್ಷೇತ್ರದಲ್ಲಿ ಕೃಷಿಗೆ ಸಾಲ ಸೌಲಭ್ಯ ನೀಡುವ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯವಾಗಬೇಕು. ಆದರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುವ ನಿರ್ಧಾರಗಳಿಂದ ಇತರೆ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿ ಕಷ್ಟವಾ-ಗುತ್ತಿದೆ ಎಂದರು.

ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಪರವಾಗಿ ಪ್ರಶ್ನೆ ಮಾಡಿದ ಬನವತಿ ಗ್ರಾಮದ ರೈತ ಚಿಕ್ಕಕದರಪ್ಪ, ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ಇಡೀ ತಾಲ್ಲೂಕಿನ ಎಲ್ಲಾ ಸದಸ್ಯರಿಗೂ ತಿಳಿಯುವಂತೆ ಪ್ರಚಾರವನ್ನೆ ಮಾಡುವುದಿಲ್ಲ. ಕೆಲವರಷ್ಟೇ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕಾರಿಯಾಗುವಂತೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಇದರಿಂದ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇರುವ ಸದಸ್ಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

- Advertisement - 

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಬ್ಯಾಂಕಿನ ನಿರ್ದೇಶಕ ಟಿ.ವಿ.ಲಕ್ಷ್ಮೀನಾ ರಾಯಣ್, ಸಹಕಾರಿ ತತ್ವದ ಅಡಿಯಲ್ಲಿ ನಡೆಯುವ ಯಾವುದೇ ಸಂಸ್ಥೆಯಲ್ಲಿ ಮತದಾನದ ಹಕ್ಕು ಹಾಗೂ ಸ್ಪರ್ಧಿಸುವ ಅವಕಾಶ ದೊರೆಯಲು ಸಂಸ್ಥೆಯಲ್ಲಿ ವ್ಯವಹಾರ ನಡೆಸಬೇಕು ಮತ್ತು ಸರ್ವ ಸದಸ್ಯರ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸದಸ್ಯತ್ವ ಪಡೆದ ಮಾತ್ರಕ್ಕೆ ಮತದಾನದ ಹಕ್ಕು ದೊರೆಯುವುದಿಲ್ಲ ಎಂದರು.

ಬ್ಯಾಂಕಿನಿಂದ ಬೆಳೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿರುವ ರೈತರನ್ನು ಅಭಿನಂದಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಎಲ್‌.ಕೆ.ರಾಮಚಂದ್ರಬಾಬು, ನಿರ್ದೇಶಕರಾದ ಟಿ.ವಿ.ಲಕ್ಷ್ಮೀಣಾರಾಯಣ್, ಮುನಿಕೃಷ್ಣ, ಸಿ.ವಿ.ಲಕ್ಷ್ಮೀಪತಯ್ಯ, ಸಿ.ಅಶ್ವತ್ಥನಾರಾಯಣಗೌಡ, ಜಿ.ನರಸಿಂಹಮೂರ್ತಿ, ರಾಮಾಂಜಿನಪ್ಪ, ಉಗ್ರಯ್ಯ, ಬಿ.ಬಸವರಾಜು, ವಿ.ವೇಣುಕುಮಾ‌ರ್, ಸಿ.ಮುನಿಯಾನಾಯ್ಕ, ಲಕ್ಷಮ್ಮ, ರಾಜಲಕ್ಷ್ಮೀ, ಆ‌ರ್.ಶೋಭ, ಬ್ಯಾಂಕಿನ ವ್ಯವಸ್ಥಾಪಕ ಎಸ್.ದಕ್ಷಿಣಮೂರ್ತಿ ಇದ್ದರು.

 

Share This Article
error: Content is protected !!
";