ಚಿತ್ರದುರ್ಗದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳಿಗೆ ಮಹಾ ಆಡಿಷನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೀ಼ಕನ್ನಡ – ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿಕಿಲಾಡಿಗಳು ಮಹಾ ಆಡಿಷನ್ ಚಿತ್ರದುರ್ಗದಲ್ಲಿ  ಇದೇ ಶುಕ್ರವಾರದಂದು ಪ್ರತಿಭೆಗಳನ್ನು ಗುರುತಿಸುವಲ್ಲಿ ನಂ.1 ಚಾನೆಲ್ ಆದ ಜೀ಼ಕನ್ನಡ ವಾಹಿನಿ ಈಗ ಮತ್ತೊಮ್ಮೆ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡುತ್ತಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್  31 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ನೀವು ಮುಂದಿನ ಡ್ಯಾನ್ಸಿಂಗ್  ಅಥವಾ ಕಾಮಿಡಿ ಕಿಂಗ್ ಆಗಬೇಕು ಅಂದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ.

- Advertisement - 

ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್  ಕರ್ನಾಟಕ ಡ್ಯಾನ್ಸ್  ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್  ಮಾಡುವವರಾಗಿರಬೇಕು.

ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ 60 ವರುಷದ ಒಳಗಿರಬೇಕು ಮತ್ತು ನಿಮ್ಮದೇ ಕಾಮಿಡಿ ಸ್ಕಿಟ್ ಇರಬೇಕು. ರೀಲ್ಸ್ ವಿಡಿಯೋಗಳಿಗೆ ಅವಕಾಶವಿಲ್ಲ, ದಿನಾಂಕ19 ಸೆಪ್ಟೆಂಬರ್ 2025 ಶುಕ್ರವಾರ  ಬೆಳಗ್ಗೆ 9 ಗಂಟೆಗೆ, ವಿವೇಕಾನಂದ ಕಾಲೇಜ್ ಆಫ್  ನರ್ಸಿಂಗ್, ಬಸಪ್ಪ ಆಸ್ಪತ್ರೆ,ಆರ್ ಟಿ ಓ ಕಚೇರಿ ಹತ್ತಿರ, ತುರುವನೂರು ರಸ್ತೆ, ಚಿತ್ರದುರ್ಗ ಇಲ್ಲಿ ಆಡಿಷನ್ ನಡೆಯಲಿದ್ದು

- Advertisement - 

ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪಾಸ್ಪೋರ್ಟ್ ಸೈಜ್ ಪೋಟೋ ಹಾಗು ಅಡ್ರೆಸ್ ಪ್ರೂಪ್ ಜೆರಾಕ್ಸ್  ಜೊತೆಗೆ ಬನ್ನಿ,ಜೀಕನ್ನಡ  ವಾಹಿನಿಯಲ್ಲಿ ಆಡಿಷನ್ ಗಳಿಗೆ ಯಾವುದೇ ಶುಲ್ಕ ಕಟ್ಟುವಂತಿಲ್ಲ,ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿಯು ತಿಳಿಸಿದೆ.

 

 

 

 

Share This Article
error: Content is protected !!
";