ಸಂಸ್ಕರಿಸಿದ ಆಹಾರ ಮತ್ತು ಜಂಕ್ ಫುಡ್‌ಗಳಿಂದ ದೂರ ಇರಿ- ಸಣ್ಣರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪೌಷ್ಟಿಕ ಆಹಾರ ಎಂದರೆ ಶರೀರಕ್ಕೆ ಅಗತ್ಯವಿರುವ ಪ್ರೋಟೀನ್, ಕಾರ್ಬೋ ಹೈಡ್ರೇಟ್‌ಗಳು, ಕೊಬ್ಬು, ಜೀವಸತ್ವಗಳು (ವಿಟಮಿನ್‌ಗಳು), ಖನಿಜಗಳು ಮತ್ತು ನೀರನ್ನು ಸಮತೋಲಿತವಾಗಿ ಒದಗಿಸುವ ಆಹಾರವಾಗಿದೆ ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕ ಸಣ್ಣ ರಂಗಮ್ಮ ಹೇಳಿದರು.

ಹಿರಿಯೂರು ತಾಲೂಕಿನ ಜೆಜೆ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನಾಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

- Advertisement - 

ಉತ್ತಮ ಆರೋಗ್ಯಕ್ಕಾಗಿ, ಸಂಸ್ಕರಿತ ಆಹಾರಗಳು ಮತ್ತು ಜಂಕ್ ಫುಡ್‌ಗಳನ್ನು ಕಡಿಮೆಮಾಡಬೇಕು. ತಾಜಾ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಮೀನು, ಮೊಟ್ಟೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕ ಸಣ್ಣ ರಂಗಮ್ಮ ತಿಳಿಸಿದರು.
ಸಮತೋಲಿತ ಆಹಾರ: ನಾವು ಮತ್ತು ನೀವು ಬಳಸುವ ಆಹಾರದಲ್ಲಿ ಎಲ್ಲ ರೀತಿಯ ಸತ್ವವುಳ್ಳ ಆಹಾರ ಸೇವಿಸಬೇಕು ಎಂದರು.

ಸೊಪ್ಪು, ತರಕಾರಿಗಳನ್ನು ಬೇಯಿಸುವಾಗ ಮುಚ್ಚಿ ಬೇಯಿಸುವುದರಿಂದ ವಿಟಮಿನ್‌ಗಳು ಪೋಷಕಾಂಶಗಳು ನಷ್ಟವಾಗುವುದಿಲ್ಲ. ಫಾಸ್ಟ್ ಫುಡ್, ಜಂಕ್ ಫುಡ್, ಕುಕೀಸ್, ಮಾರ್ಗರಿನ್ ಮುಂತಾದ ಸಂಸ್ಕರಿತ ಪದಾರ್ಥಗಳನ್ನು ಕಡಿಮೆ ಮಾಡಬೇಕು ಎಂದು ಸಣ್ಣ ರಂಗಮ್ಮ ಕಿವಿ ಮಾತು ಹೇಳಿದರು.

- Advertisement - 

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಯವರು ನಿರೀಕ್ಷಣಾಧಿಕಾರಿ ಮಂಜುನಾಥ ಮಾತನಾಡಿ ಕ್ರಿಯಾಶೀಲ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಯೂ ಆರೋಗ್ಯಕ್ಕೆ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು.

ಗರ್ಭಿಣಿಯರಿಗೆ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಂಶದಿಂದ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು. ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಮಂಜುಳಾ ಅವರು ತಿಳಿಸಿದರು. ಆಶಾ ಕಾರ್ಯಕರ್ತೆಯರು ಅಸಾಂಕ್ರಾಮಿಕ ರೋಗಗಳ ಕುರಿತು ಜನರಿಗೆ ಹರಿವು ಮೂಡಿಸಿದರು. 

ಹಿರಿಯ ಸುರಕ್ಷಣಾಧಿಕಾರಿ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯರಾದ ಭರತ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಬಾಣಂತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

 

Share This Article
error: Content is protected !!
";