ಜಾತಿಗಣತಿಯಲ್ಲಿ ಬೌದ್ದ ಧರ್ಮ, ಮಾದಿಗ, ಹೊಲೆಯ ಎಂದು ಬರೆಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾತಿ ಮತ್ತು ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಬೌದ್ದ ದಾಖಲಾತಿ ಆಂದೋಲನ ಆರಂಭವಾಗಬೇಕಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸೆ.೨೨ರಂದು ಕರ್ನಾಟಕ ಸರಕಾರ ಹಿಂದುಳಿದ ಆಯೋಗದಿಂದ ನಡೆಸುವ ಜಾತಿ ಗಣತಿ ಸಮೀಕ್ಷೆಯಲ್ಲಿ ಮಾದಿಗ ಮತ್ತು ಹೊಲಯ ಜಾತಿಗಳು ಸೇರಿದಂತೆ ಪರಿಶಿಷ್ಟ ಜಾತಿಯ ೧೦೧ ಜಾತಿಗಳು ಧರ್ಮದ ಕಲಂನಲ್ಲಿ ಬೌದ್ಧ ಎಂದು ಬರೆಯಿಸಿ ಜಾತಿಯ ಕಲಂನಲ್ಲಿ ತಮ್ಮ ಉಪಜಾತಿಗಳನ್ನು ಬರೆಸುವುದರಿಂದ ಸಂವಿಧಾನಾತ್ಮಕವಾಗಿ ಸಿಗುತ್ತಿರುವ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ.

- Advertisement - 

ಪರಿಶಿಷ್ಠ ಜಾತಿಯಲ್ಲೇ ಮುಂದುವರೆಯಲು ಇಚ್ಛಿಸುವರು ಕರ್ನಾಟಕ ಜಾತಿಗಣತಿ ಫಾರಂನ ಧರ್ಮದ ಕಲಂ೮ರ ಕ್ರಮಸಂಖ್ಯೆ ೬ರಲ್ಲಿ ಇರುವ ಬೌದ್ದ ಅನ್ನುವ ಅವಕಾಶ ಆಯ್ಕೆ ಮಾಡಿಕೊಂಡು, ಕಲಂ ೯ರಲ್ಲಿನ ಜಾತಿ ಕಲಂನಲ್ಲಿ ಪರಿಶಿಷ್ಠ ಜಾತಿ ಎಂದು ಆಯ್ಕೆ ಮಾಡಿ ನಂತರದ ಕಲಂ ೧೦ರ ಉಪಜಾತಿ ಕಲಂನಲ್ಲಿ ತಮ್ಮ ಮೂಲಜಾತಿ

ಅಂದರೆ ಪರಿಶಿಷ್ಠ ಜಾತಿಯ ೧೦೧ಕಲಂನಲ್ಲಿ ಬರುವ ತಮ್ಮ ಮೂಲ ಜಾತಿ/ತಾವು ಪಡೆದಿರುವ ಜಾತಿಪ್ರಮಾಣ ಪತ್ರದಲ್ಲಿ ದಾಖಲೆ ಆಗಿರುವ ಜಾತಿ ನಮೂದಿಸುವ ಮೂಲಕ ಸಂವಿಧಾನದತ್ತ ಮೀಸಲಾತಿ ಹಕ್ಕಿನೊಡನೆ ತಮ್ಮ ಮೂಲ ಧರ್ಮ ಬೌದ್ದ ಧರ್ಮಕ್ಕೆ ಮರಳುವ ಮೂಲಕ ಬೊಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಮೇಲೆ ಇಟ್ಟ ನಂಬಿಕೆ ಉಳಿಸುವ ಜತೆಗೆ ಅವರಿಗೆ ಗೌರವ ಸಲ್ಲಿಸುವಂತೆ ಮನವಿ ಮಾಡಿದ್ಧಾರೆ.

- Advertisement - 

ಈ ಸಮೀಕ್ಷೆಯಲ್ಲಿ ಬೌದ್ದ ಆಯ್ಕೆ ಮಾಡುವ ಮೂಲಕ ಸಂವಿಧಾನದತ್ತವಾದ ಧಾರ್ಮಿಕ ಸ್ವಾತಂತ್ರö್ಯವನ್ನು ಸಂಪೂರ್ಣವಾಗಿ ಪಡೆದುಕೊಂಡು ಶಿಕ್ಷಣ, ಉದ್ಯೋಗ ಹಾಗೂ ರಾಜೀಕಿಯ ಮೀಸಲಾತಿ ಹಕ್ಕನ್ನು ಈಗಿನಂತೆಯೇ ಉಳಿಸಿಕೊಳ್ಳುತ್ತೇವೆ. ಮುಂದಿನ ಪೀಳಿಗೆಯು ಜಾತಿ ಮತ್ತು ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತವಾಗಿ ಗೌರವಯುತ ಬದಕನ್ನು ಕಟ್ಟಿಕೊಳ್ಳಲು ಕಾರಣರಾಗುತ್ತೇವೆ.

೧೯೯೦ರ ಆಮೆಂಡ್ಮಮೆಂಟ್ ಪ್ರಕಾರ ನಮ್ಮ ಮೂಲ ಧರ್ಮ ಧಮ್ಮಕ್ಕೆ ಮರಳಲು ಹಾಗೂ ನಮಗೆ ಸಂವಿದಾನ ಅಡಿಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ಮೀಸಲಾತಿ ಯಥವತ್ತಾಗಿ ಪಡೆಯಲು ಅವಕಾಶ ಕಲ್ಪಿಸಿತು. ಆದರೆ ಈ ಕಾನೂನನ್ನು ರಾಜ್ಯದಲ್ಲಿ ಕಳೆದ ೩೫ವರ್ಷದಿಂದ ಜಾರಿ ಮಾಡದೆ ನಮ್ಮನ್ನು ವಂಚಿಸಿರುವುದಲ್ಲದೇ, ಸಂವಿಧಾನಕ್ಕೆ ದ್ರೋಹ ಬರಲಾಗಿದೆ.

ಪರಿಣಾಮವಾಗಿ ನಾವು ನಮ್ಮನ್ನು ಜಾತಿ ಅಸ್ಪೃಶ್ಯತೆ ನೇತು ಹಾಕಿಕೊಂಡು ಬದುಕುವಂತಹ ಸ್ಥಿತಿ ಬಂದಿದೆ. ಆದ್ದರಿಂದ ಜನತೆ ಜಾಗೃತರಾಬೇಕು. ಎಲ್ಲಾ ಬೌದ್ದ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಬುದ್ದಯಾನ ಪಂಥಗಳು ಹಾಗೂ ಪ್ರಗತಿಪರರೆಲ್ಲಾರು ಈ ವಿಷಯದ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರಬುಧ್ದ ಭಾರತ ನಿರ್ಮಾಣಕ್ಕೆ ಕೈ ಜೋಡಿಸ ಬೇಕೆಂದು ಮನವಿ ಮಾಡಿದ್ದಾರೆ.

 

 

 

 

Share This Article
error: Content is protected !!
";