27 ಗ್ರಾಮ ಪಂಚಾಯಿತಿಗಳಲ್ಲಿ ʼಸ್ವಚ್ಛೋತ್ಸವʼ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಗಾಂಧೀಜಯಂತಿ ಅಂಗವಾಗಿ
ಸ್ವಚ್ಛತಾ ಹೀ ಸೇವಾಪಾಕ್ಷಿಕ-2025 (ಸ್ವಚ್ಛತೆಯೇ ಸೇವೆ) ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಡಿ.ದೊಡ್ಡಸಿದ್ದಯ್ಯ ತಿಳಿಸಿದ್ದಾರೆ.

ಸ್ವಚ್ಛತಾ ಹೀ ಸೇವಾ”  ಅಭಿಯಾನವನ್ನು 17 ನೇ ಸೆಪ್ಟೆಂಬರ್ ರಿಂದ 02 ಅಕ್ಟೋಬರ್ ರವರೆಗೆ  ಸ್ವಚ್ಚೋತ್ಸವಎಂಬ ಘೋಷಾವಾಕ್ಯದೊಂದಿಗೆ  ಎಲ್ಲಾ ಕಲ್ಯಾಣಿಗಳು , ನೀರಿನ ತೊಟ್ಟಿಗಳು, ಎಲ್ಲಾ ಶಾಲೆ ಮತ್ತು ಅಂಗನವಾಡಿಗಳು, ಸಂತೆ ಅಂಗಡಿ ಮಳಿಗೆಗಳ ಆವರಣ, ಆಸ್ಪತ್ರೆಗಳು, ದೇವಾಲಯಗಳು, ಚರಂಡಿಗಳು,ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳು

- Advertisement - 

ಇತ್ಯಾದಿ ಸಾರ್ಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ತಾಲ್ಲೂಕಿ ಎಲ್ಲಾ ಗ್ರಾಮ ಪಂಚಾಯಿತಿಗಳು ಶ್ರಮಿಸುವ ಮೂಲಕ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತೀ ವರ್ಷ ಅಕ್ಟೋಬರ್ 02 ರಂದು ಸ್ವಚ್ಛ ಭಾರತ ದಿನ ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";