ಸೆ.22ರಿಂದ ಅ.2ರವರೆಗೆ ದುರ್ಗಾದೇವಿ ದುರ್ಗೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರದ ಆನೆಬಾಗಿಲು ಸಮೀಪ ಸೆ.೨೨ ರಿಂದ ಅ. ೨ ರವರೆಗೆ ಐದನೇ ವರ್ಷದ ದುರ್ಗಾದೇವಿ ಪ್ರತಿಷ್ಟಾಪಿಸಿ ದುರ್ಗೋತ್ಸವ ಆಚರಿಸಲಾಗುವುದೆಂದು ಹಿಂದೂ ಘರ್ಜನೆ ಸೇನಾ ಸಂಸ್ಥಾನ ಅಧ್ಯಕ್ಷ ಸಾಗರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೨ ದಿನಗಳ ಕಾಲ ದುರ್ಗಾ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಿ ಪ್ರತಿನಿತ್ಯವೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.

- Advertisement - 

ಹೋಮ, ಹವನವಿರುತ್ತದೆ. ಅ.೨ ರಂದು ಮೆರವಣಿಗೆ ಮೂಲಕ ದುರ್ಗಾದೇವಿಯನ್ನು ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದುರ್ಗಾದೇವಿಯ ದರ್ಶನ ಪಡೆಯುವಂತೆ ಸಾಗರ್ ಕೋರಿದ್ದಾರೆ. ಮಂಜುನಾಥ್, ಪಾಂಡುರಂಗಪ್ಪ, ಪೇಜ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

- Advertisement - 

Share This Article
error: Content is protected !!
";