ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಹಾಲು ಒಕ್ಕೂಟದ ೫೦೦ ನಂದಿನಿ ಮಿಲ್ಕ್ ಪಾರ್ಲರ್‌ಗಳನ್ನು ಏಕಕಾಲದಲ್ಲಿ ಕಲ್ಬುರ್ಗಿಯಲ್ಲಿ ಸಾಂಕೇತಿಕವಾಗಿ ಆನ್‌ಲೈನ್ ಮೂಲಕ ಉದ್ಘಾಟಿಸಿದ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ಶಿಮೂಲ್‌ನಿಂದ ೨೯ ನಂದಿನಿ ಮಿಲ್ಕ್ ಪಾರ್ಲರ್‌ಗಳನ್ನು ಉದ್ಘಾಟಿಸಲಾಯಿತು.
ಚಿತ್ರದುರ್ಗದ ಐ.ಯು.ಡಿ.ಪಿ.ಲೇಔಟ್, ಸಾಸಲುಹಳ್ಳ, ಹೊಳಲ್ಕೆರೆ, ತಾಳ್ಯ, ಹೆಚ್.ಡಿ.ಪುರ, ಮಾಡದಕೆರೆ, ಧರ್ಮಪುರ, ಹಿರಿಯೂರು, ನೇರಲಗುಂಟೆ ಸೇರಿದಂತೆ ೨೯ ಕಡೆ ನಂದಿನಿ ಮಿಲ್ಕ್ ಪಾರ್ಲರ್‌ಗಳನ್ನು ಶಿಮುಲ್ ನಿರ್ದೇಶಕರುಗಳಾದ ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರ್, ಬಿ.ಸಿ.ಸಂಜೀವಮೂರ್ತಿ ಇವರುಗಳು ಉದ್ಘಾಟಿಸಿ ನಂದಿನಿ ಮಿಲ್ಕ್ ಪಾರ್ಲರ್‌ಗಳಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಸಹಿ ತಿನಿಸುಗಳು ದೊರೆಯುತ್ತದೆಂದು ಹೇಳಿದರು.
ಬಿ.ಆರ್.ರವಿಕುಮಾರ್, ಚಿತ್ರದುರ್ಗ ಜಿಲ್ಲೆ ಮಾರುಕಟ್ಟೆ ಉಸ್ತುವಾರಿಗಳಾದ ಬಿ.ಎಂ.ಹನುಮಂತಪ್ಪ, ಎಂ.ಪುಟ್ಟರಾಜು, ಜಿ.ರವಿಚಂದ್ರ, ಇರ್ಫಾನ್ ಅಲಿಖಾನ್ ಅಫ್ರಿದಿ, ಕೆ.ಎನ್.ಆಕಾಶ್, ಎ.ರಂಗಸ್ವಾಮಿ, ಎಸ್.ಶ್ರೀಧರ್ ಹಾಗೂ ಪಾರ್ಲರ್ ಲೈಸೆನ್ಸ್‌ದಾರರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

