ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಮೀಪದ ಬೀರಾವರ ಗ್ರಾಮದ ಸಿದ್ದಲಿಂಗಮ್ಮ (90) ವಯೋಸಹಜ ಕಾಯಿಲೆಯಿಂದ ಗುರುವಾರ ನಿಧನರಾಗಿದ್ದಾರೆ.
ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಪ್ರಕಾಶ್ ಬೀರಾವರ್ ಸೇರಿದಂತೆ ಆರು ಜನ ಮಕ್ಕಳು ಅಪಾರ ಬಂಧು ಬಳಗ ಅಗಲಿದ್ದಾರೆ. ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಗುವುದು ಎಂದು ಪ್ರಕಾಶ್ ಬೀರಾವರ್ ತಿಳಿಸಿದ್ದಾರೆ.

