ಸರ್ಪ ಒಕ್ಕಲಿಗ ಎಂದು ನಮೂದಿಸಿ- ಓಂಕಾರಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇದೇ ತಿಂಗಳ ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಒಕ್ಕಲಿಗ ಮತ್ತು ಉಪಜಾತಿ ಕಾಲಂನಲ್ಲಿ ಸರ್ಪ ಒಕ್ಕಲಿಗ ಎಂದು ಬರೆಸಬೇಕು ಎಂದು ಅಖಿಲ ಕರ್ನಾಟಕ ಸರ್ಪ ಒಕ್ಕಲಿಗರ (ಸಲುಪುರ) ಕ್ಷೇಮ ಅಭಿವೃದ್ದಿ ಸಂಘದ ಅಧ್ಯಕ್ಷ ಓಂಕಾರಪ್ಪ ಮನವಿ ಮಾಡಿದ್ದಾರೆ.

ಜಾತಿ ಕಾಲಂ ನಂಬರ್ 9ರಲ್ಲಿ ಎ 1541 ಒಕ್ಕಲಿಗ, ಕಾಲಂ ನಂಬರ್ 10 ಉಪಜಾತಿ ಎ 1273 ಸರ್ಪ ಒಕ್ಕಲಿಗ ಪರ್ಯಾಯ ಜಾತಿ ಸಲುಪರು ಎಂದು ಬರೆಸಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕರ್ನಾಟಕ ಸಲುಪರ ಜನಾಂಗವನ್ನು ಸೇರಿಸಿಲ್ಲ ಜಾತಿ ಕಾಲಂನಲ್ಲಿ ಸಲುಪರು ಎಂದು ನಮೂದಿಸಿದರೆ ಸರ್ಕಾರಗಳ ಮೀಸಲಾತಿ ಸಿಗುವುದಿಲ್ಲ ಎಂದು ಅವರು ಎಚ್ಚರಿಸಿದರು.

- Advertisement - 

ಸೆಪ್ಟೆಂಬರ್ 14ರಂದು ತುಮಕೂರಿನಲ್ಲಿ ನಡೆದ ಸಂಘದ ಸಭೆಯಲ್ಲಿ ಜಾತಿ ಸಮೀಕ್ಷೆಯಲ್ಲಿ ಮೇಲೆ ತಿಳಿಸಿರುವ ರೀತಿಯಲ್ಲಿ ಬರಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ಓಂಕಾರಪ್ಪ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";