ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೂಪರ್ ಸಿಎಂ ಸುರ್ಜೇವಾಲ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ. ಸ್ಟಾರ್ ಹೋಟೆಲ್ ಒಳಗೆ ಇದ್ದು ನಿಮ್ಮ ಸಭೆಗಳನ್ನು ಅಲ್ಲಿಯೇ ಮುಗಿಸುವುದು ಉತ್ತಮ.
ಹೊರಗೆ ಬಂದರೆ ಬೆಂಗಳೂರಿನ ರೋಲರ್-ಕೋಸ್ಟರ್ ರಸ್ತೆಗಳಿಗೆ ಸುರಕ್ಷತಾ ಸಾಧನಗಳು ಮತ್ತು ಕಸದ ದುರ್ವಾಸನೆಗೆ ಮೂಗಿನ ಕ್ಲಿಪ್ ಬೇಕಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.
ನೆನಪಿಡಿ, ನಿಮ್ಮ ಡಿಸಿಎಂಗೆ ದೂರು ನೀಡಬೇಡಿ, ಅವರು ಅದನ್ನು “ಬ್ಲ್ಯಾಕ್‌ಮೇಲ್” ಎಂದು ಕರೆಯುತ್ತಾರೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

