ಎರಡು ದಿನದ ಕ್ರೀಡಾ ಕೂಟಕ್ಕೆ ಸಂಭ್ರಮದ ತೆರೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಾದಗೊಂಡನಹಳ್ಳಿ ರಸ್ತೆ ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕ್ರೀಡಾಕೂಟದ ಅಂತಿಮ ಕಬ್ಬಡ್ಡಿ (ಫೈನಲ್)ಪಂದ್ಯಾವಳಿ ಶ್ರೀ ವಾಣಿ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜುಗಳ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಶಾಸಕ ದೀರಜ್ ಮುನಿರಾಜು ಭಾಗವಹಿಸಿ ಸ್ಪರ್ಧೆ ಗೆ ಚಾಲನೆ ನೀಡಿದರು.ಅಂತಿಮವಾಗಿ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ತಂಡ ಜಯಗಳಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಯಿತು.

- Advertisement - 

ಕಬ್ಬಡ್ಡಿ ಪಂದ್ಯಾವಳಿ ಉದ್ಗಾಟನಾ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಸುನೀತಾ, ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್, ವಿದ್ಯಾನಿದಿ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀನಿವಾಸ್, ದೇವರಾಜ್ ಅರಸ್ ಕಾಲೇಜು ಪ್ರಾಂಶುಪಾಲ ಜೆ ವಿ ಚಂದ್ರಶೇಖರ್, ಕ್ರೀಡಾಕೂಟದ ಸಂಚಾಲಕ ಟಿ ಆರ್ ಶ್ರೀರಾಮಗೌಡ, ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸಚಾರಿ,ನೇತ್ರಾವತಿ,

ಉಪನ್ಯಾಸಕರುಗಳಾದ ವಿಶಾಲಾಕ್ಷಿ,ಆಂಜಿನಪ್ಪ, ಮಂಗಳಗೌರಿ, ಹರೀಶ್, ಪುಷ್ಪಲತಾ, ಕೌಸರ್ ಫಾತಿಮಾ, ರುದ್ರಯ್ಯ, ಹೆಚ್ ಎನ್ ಪ್ರಭಾಕರ್, ಮಮತಾ, ಮಧುಕರ್, ಶಿವಪ್ರಸಾದ್,

- Advertisement - 

     ನಗರಸಭಾ ಸದಸ್ಯರುಗಳಾದ ಎಸ್ ಪದ್ಮನಾಭ್, ಬಂತಿ ವೆಂಕಟೇಶ್, ಶಿವ, ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಾಫೀರ್,ಶ್ರೀಕಾಂತ್ ಸೇರಿದಂತೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟ ಮುಕ್ತಾಯವಾಯಿತು.

 

 

 

 

Share This Article
error: Content is protected !!
";