ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದವಿ ಪಡೆದ ನಂತರ ಸರ್ಕಾರಿ ನೌಕರಿ ಪಡೆಯಬೇಕೆಂಬ ಉದ್ದೇಶ ಹೊಂದದೆ ಸ್ವಯಂ ಉದ್ಯಮ ಸ್ಥಾಪನೆ ಮಾಡುವುದರ ಮೂಲಕ ಬೇರೆಯವರಿಗೆ ಕೆಲಸ ಕೂಡುವ ಕಾರ್ಯಕ್ಕೆ ಮುಂದಾಗುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಿ.ಆನಂದ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ನಗರದ ಎಸ್.ಜೆ.ಎಂ.ಐ.ಟಿ. ಇಂಜನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಯು.ಟಿ.ಸಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್.ಎ.ಎಂ.ಪಿ.) ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಇನ್ಕ್ಯುಬೇಷನ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಓದನ್ನು ಅವರು ಪೆÇೀಷಕರು ನಿರ್ಣಯ ಮಾಡುತ್ತಾರೆ. ಅವರು ಏನು ಓದಬೇಕು ಎನ್ನುವುದನ್ನು ಮಕ್ಕಳ ಮೇಲೆ ಹೇರುತ್ತಾರೆ. ಮಕ್ಕಳು ತಮಗೆ ಇಷ್ಠ ಇಲ್ಲದಿದ್ದರೂ ಅದನ್ನೇ ಓದುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಅವರು ಅತ್ಮಹತ್ಯೆಯಂತಹ ಕಾರ್ಯಕ್ಕೆ ಮುಂದಾಗುತ್ತಾರೆ ಎಂದರು.
ರಾಜ್ಯದಲ್ಲಿ ಪ್ರತಿ ವರ್ಷ 10ಲಕ್ಷ ವಿದ್ಯಾರ್ಥಿಗಳು ವಿವಿಧ ರೀತಿಯ ಪದವಿ ಪಡೆದು ಹೊರ ಬರುತ್ತಿದ್ದಾರೆ. ಈ ರೀತಿಯಾಗಿ ಹೊರಗೆ ಬಂದವರಿಗೆಲ್ಲಾ ಸರ್ಕಾರ ಉದ್ಯೋಗ ನೀಡುತ್ತದೆ ಎಂದು ಭರವಸೆ ನೀಡಿಲ್ಲ.
ಅಲ್ಲದೆ ವಿದ್ಯಾರ್ಥಿಗಳು ಸಹ ನಮಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳದೇ ಕಲಿತ ವಿದ್ಯೆಗೆ ಅನುಗುಣವಾಗಿ ಸ್ವಯಂ ಉದ್ಯೋಗ ಆರಂಭ ಮಾಡುವತ್ತಾ ಮುಂದಾಗಬೇಕಿದೆ ಎಂದ ಅವರು, ದೊಡ್ಡ ದೊಡ್ಡ ಉದ್ಯಮಿಗಳಾದ ಆದಾನಿ, ಅಂಬಾನಿ, ಟಾಟಾ ಅವರು ಸಹಾ ಎಲ್ಲರಂತೆ ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯಮ ಪ್ರಾರಂಭ ಮಾಡಿ ನಂತರ ಬೃಹತ್ ಉದ್ಯಮಿಗಳಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.
ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಹಲವಾರು ವಿವಿಧ ರೀತಿಯ ಯೋಜನೆಗಳು ಇವೆ. ಇದರ ಮೂಲಕ ಸ್ವಂತವಾದ ಕೈಗಾರಿಕೆಯನ್ನು ಕಡಿಮೆ ಬಂಡವಾಳದಲ್ಲಿ ಪ್ರಾರಂಭ ಮಾಡುವುದರ ಮೂಲಕ ಉದ್ಯಮಿಗಳಾಗಿ. ಇದರಿಂದ ನಿಮಗೂ ಸಹಾಯವಾಗುವುದಲ್ಲದೆ ಬೇರೆಯವರಿಗೂ ಸಹಾ ಉದ್ಯೋಗ ನೀಡಿದಂತೆ ಆಗುತ್ತದೆ ಎಂದು ಕಿವಿ ಮಾತು ಹೇಳಿದರು.
ಎಸ್,ಜೆ.ಎಂ.ಐ.ಟಿ. ಕಾಲೇಜಿನ ಪ್ರಾಂಶುಪಾಲರಾದ ಡಾ.ಭರತ್ ಮಾತನಾಡಿ, ಪದವಿಯನ್ನು ಪಡೆದವರೆಲ್ಲಾ ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ,
ಈ ಹಿನ್ನಲೆಯಲ್ಲಿ ತಾವು ಕಲಿತ ಮೇಲೆ ಸ್ವಾವಲಂಭಿಯಾಗಿ ಇರುವುದನ್ನು ಕಲಿಯಬೇಕಿದೆ. ತಮ್ಮ ಕಲಿಗೆ ಅನುಗುಣವಾಗಿ ಸ್ವಂತವಾದ ಉದ್ಯಮ ಪ್ರಾರಂಭ ಮಾಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಬೇಕಿದೆ. ಇಂದಿನ ದಿನಮಾನದಲ್ಲಿ ಎಲ್ಲವೂ ಸಹಾ ಡಿಜಿಟಲಿಕರಣವಾಗುತ್ತಿದೆ.
ಇದರ ಪ್ರಯೋಜವನ್ನು ಪಡೆಯಬೇಕಿದೆ. ತಂತ್ರಜ್ಞಾನವನ್ನು ಬಳಕೆ ಮಾಡುವುದರ ಮೂಲಕ ಪ್ರಗತಿಯನ್ನು ಸಾಧಿಸಬೇಕಿದೆ. ನಾನು ಏನ್ನನಾದರೂ ಸಾಧನೆ ಮಾಡುತ್ತೇನೆ ಎಂಬ ಛಲ ಹೊಂದಬೇಕಿದೆ. ಇದರಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ತಿಮ್ಮಯ್ಯ, ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಕೃಷ್ಣಾರೆಡ್ಡಿ, ಮಂಜುನಾಥ್, ಕುಮಾರ್ ಭಾಗವಹಿಸಿದ್ದರು.

