ಹಣ್ಣು, ಔಷಧಿ ಅಂಗಡಿಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಸೋಮಣ್ಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರಿನ ಮಾರುಕಟ್ಟೆ ಆವರಣದಲ್ಲಿಂದು ಹಣ್ಣಿನ ಮಳಿಗೆಗೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಬೆಲೆ ಇಳಿಕೆ ಮಾಡಿದ್ದರ ಬಗ್ಗೆ ವ್ಯಾಪಾರಸ್ಥರೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಚರ್ಚಿಸಿದರು.
ಜಿಎಸ್‌ಟಿ ಪರಿಷ್ಕರಣೆಯ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ ಅವರಿಗೆ ಸ್ವದೇಶಿ ಉತ್ಪನ್ನಗಳ ಬಳಕೆಯ ಕುರಿತು ಜಾಗೃತಿ ಮೂಡಿಸಿದರು.

ತುಮಕೂರಿನ ಮಾರುಕಟ್ಟೆ ಯಾರ್ಡ್‌ನಲ್ಲಿ ಕಿರು ಆಹಾರ ಮಳಿಗೆಗೆ ಭೇಟಿ ನೀಡಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಜಿಎಸ್‌ಟಿ ಬೆಲೆ ಇಳಿಕೆ ನಿರ್ಧಾರದಿಂದ ಸಂತಸವಾಗಿದೆ ಎಂದು ಗ್ರಾಹಕರು ಸಂಭ್ರಮ ಹಂಚಿಕೊಂಡರು.

- Advertisement - 

ಪ್ರಧಾನಿಗಳ ಈ ನಿರ್ಧಾರದ ಬಗ್ಗೆ ಅವರು ವ್ಯಕ್ತಪಡಿಸಿದ ಸಂತಸದ ಭಾವನೆ ಸಮಸ್ತ ದೇಶದ ಜನರ ಭಾವನೆಯೂ ಆಗಿದೆ. ಇದೇ ವೇಳೆ, ಅವರಿಗೆ ದೇಶೀಯವಾಗಿ ತಯಾರಿಸಲಾದ ಉತ್ಪನ್ನಗಳ ಬಳಕೆಯ ಬಗ್ಗೆ ಸಚಿವ ಸೋಮಣ್ಣ ಅವರು ತಿಳಿಸಿದರು.

ತುಮಕೂರಿನ ಸಿದ್ದರಾಮಣ್ಣ ಆಸ್ಪತ್ರೆ ಹಾಗೂ ಔಷಧ ಅಂಗಡಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಕೈಗೊಂಡ ವೈದ್ಯಕೀಯ ವಲಯದಲ್ಲಿನ ಜಿಎಸ್‌ಟಿ ಬೆಲೆ ಇಳಿಕೆಯ ಲಾಭವನ್ನು ಬಡವರಿಗೆ ತಲುಪಿಸುವಂತೆ ವೈದ್ಯರು ಮತ್ತು ಸಿಬ್ಬಂದಿಗಳಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರು ಮನವಿ ಮಾಡಿದರು.

- Advertisement - 

ಇದೇ ವೇಳೆ, ಸ್ವದೇಶಿಯವಾಗಿ ಉತ್ಪಾದನೆಯಾದ ವಸ್ತುಗಳ ಬಳಕೆಯತ್ತ ಹೆಚ್ಚಿನ ಗಮನ ಹರಿಸಬೇಕೆಂದು ಸಾರ್ವಜನಿಕರಲ್ಲಿ ಸೋಮಣ್ಣ ವಿನಂತಿಸಿದರು.

 

 

Share This Article
error: Content is protected !!
";