ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಸಮ್ಮುಖದಲ್ಲಿ ರೈತರ ಹಿತದೃಷ್ಟಿಯಿಂದ ಹಿರಿಯೂರು ತಾಲೂಕು ಕಿಸಾನ್ ಘಟಕದ ಹೊಸ ಹುದ್ದೆಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಎ.ನಾಗರಾಜ್ ಪರಶುರಾಂಪುರ ಇವರು ವಿತರಣೆ ಮಾಡಿದರು.
ನೂತನ ಕಿಸಾನ್ ಘಟಕದ ಪದಾಧಿಕಾರಿಗಳು:
ಅಧ್ಯಕ್ಷ:ಜೆ.ಜಿ.ಹಳ್ಳಿ ಕೇಶವ್, ಉಪಾಧ್ಯಕ್ಷ: ಮಾರುತಿ (ಸ್ಟೀಫನ್), ಪ್ರಧಾನ ಕಾರ್ಯದರ್ಶಿ: ರವಿ ಸಿ., ಖಜಾಂಚಿ : ಪಾಲಾಕ್ಷ ಯಾದವ್, ಕಾತ್ರಿಕೇನಹಳ್ಳಿ. ಕಾರ್ಯದರ್ಶಿಗಳು: ವಿಶ್ವ(ಗಿಲ್ಲಿ), ಕಾರ್ತಿಕ್, ಮಂಜುನಾಥ್, ಸಾಯದ್ ಜಬಿವುಲ್ಲಾ, ಅರುಣ್ ಜಿ.ಎಂ., ಮಂಜುನಾಥ್, ಇರ್ಫಾನ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ಅಧ್ಯಕ್ಷ ಜೆ.ಜಿ.ಹಳ್ಳಿ ಕೇಶವ್, ರೈತರ ಧ್ವನಿಯಾಗಿ ನಿಂತು, ಬೀಜ–ಗೊಬ್ಬರ ಸರಬರಾಜು, ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಬರುವ ಅನುದಾನಗಳ ಮಾಹಿತಿ, ರೈತರ ಕುಂದು–ಕೊರತೆಗಳಿಗೆ ಪರಿಹಾರ, ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ತಂಡ ಮುಂದಿಟ್ಟುಕೊಂಡಿದೆ ಎಂದು ತಿಳಿಸಿದರು.
ರೈತರ ಶ್ರಮಕ್ಕೆ ಬೆಲೆ ಸಿಗುವ ಸಮಾಜ ಕಟ್ಟುವ ಉದ್ದೇಶದಿಂದ, ಹೊಸ ತಂಡವು ತ್ಯಾಗ–ನಿಷ್ಠೆ ಹಾಗೂ ಸಕಾರಾತ್ಮಕ ಮನೋಭಾವದೊಂದಿಗೆ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.

