ಕಬಡ್ಡಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸರ್ಕಾರಿ ಕಲಾ ಕಾಲೇಜ್ ತಂಡ

News Desk
- Advertisement -  - Advertisement - 

ಕಬಡ್ಡಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸರ್ಕಾರಿ ಕಲಾ ಕಾಲೇಜ್ ತಂಡ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕಬ್ಬಡಿ ಪಂದ್ಯಾವಳಿಯನ್ನು ಬಾಪೂಜಿ ಬಿ.ಇಡಿ. ಕಾಲೇಜು ಆಯೋಜನೆ ಮಾಡಿದ್ದು ಈ ಪಂದ್ಯಾವಳಿಯಲ್ಲಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ(ಸ್ವಾಯತ್ತ) ಕಬಡ್ಡಿ ತಂಡವು ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಮತ್ತು ಚಿತ್ರದುರ್ಗಕ್ಕೆ ಕೀರ್ತಿ ತಂದಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಕರಿಯಪ್ಪ ಜೆ. ಮಾಳಿಗೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನಕುಮಾರ ಡಿ.ಆರ್, ಐಕ್ಯೂಎಸಿ ಸಂಚಾಲಕಿ ಡಾ. ತಾರಿಣಿ ಶುಭದಾಯಿನಿ, ಪತ್ರಾಂಕಿತ ವ್ಯವಸ್ಥಾಪಕ ಸಾಮ್ಯುಯಲ್ ಮಾರ್ಟಿನ್  

- Advertisement - 

ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ಅಧ್ಯಾಪಕೇತರ ಮಿತ್ರರು ತಂಡದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ.

- Advertisement - 
Share This Article
error: Content is protected !!
";