ರೈತರ ಪಹಣಿ ತಿದ್ದುಪಡಿ ಆಂದೋಲನ

News Desk
- Advertisement -  - Advertisement - 

ರೈತರ ಪಹಣಿ ತಿದ್ದುಪಡಿ ಆಂದೋಲನ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಲ್ಲೂಕಿನ ರೈತರ ಪಹಣಿ ತಿದ್ದುಪಡಿ ಆಂದೋಲನ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಅಧ್ಯಕ್ಷತೆಯಲ್ಲಿ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.

ಅ ಮತ್ತು ಬ ಖರಾಬು ತಿದ್ದುಪಡಿ, ಬಿನ್/ಕೋಂ ಹೆಸರು ತಿದ್ದುಪಡಿ, ಹಿಸ್ಸಾ ತಿದ್ದುಪಡಿ, ಪಹಣಿ ಕಾಲಂ, ೩ ಮತ್ತು ೯ ವಿಸ್ತೀರ್ಣ ವ್ಯತ್ಯಾಸ ತಿದ್ದುಪಡಿ, ಎಂ.ಆರ್.ರಂತೆ ಮತ್ತು ಪಹಣಿಯಲ್ಲಿನ ಇತರೆ ದೋಷಗಳನ್ನು ಸರಿಪಡಿಸಲಾಯಿತು.

- Advertisement - 

ಇದೆ ತಿಂಗಳ ೩೦ ರವರೆಗೆ ತಿದ್ದುಪಡಿಗೆ ಅವಕಾಶವಿದ್ದು, ರೈತರು ಪ್ರಯೋಜನ ಪಡೆದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಮನವಿ ಮಾಡಿದರು.

ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಗ್ರೇಡ್-೨ ತಹಶೀಲ್ದಾರ್ ನಾಗರಾಜ್, ಶಿರಸ್ತೇದಾರ್ ವತ್ಸಲಾ ದಿವಾಕರ್ ಇವರುಗಳು ಪಹಣಿ ತಿದ್ದುಪಡಿ ಆಂದೋಲನದಲ್ಲಿ ಭಾಗವಹಿಸಿದ್ದರು.

- Advertisement - 

 

 

Share This Article
error: Content is protected !!
";