ವಿ.ಎಸ್.ಎಸ್.ಎನ್ ಸಂಘದ ವಾರ್ಷಿಕ ಮಹಾಸಭೆ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಮಧುರೆ ಹೋಬಳಿಯ ಗಂಡ್ರಗೋಳಿಪುರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಜಿ. ಬಿ.ಸದಾಶಿವಯ್ಯ ಮಾತನಾಡಿ ಸಂಘದಿಂದ ಸಾಲ ಪಡೆದ ರೈತರು ಕಾಲ ಕಾಲಕ್ಕೆ ಸೂಕ್ತ ರೀತಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಹೆಚ್. ಗಂಗೇಗೌಡ ಮಾತನಾಡಿ ರೈತರಿಗೆ ಸಂಘದ ಕಾರ್ಯಕ್ರಮಗಳು ಸೂಕ್ತ ರೀತಿಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ . ಸರ್ವನಿರ್ದೇಶಕರ ಸಹಕಾರದೊಂದಿಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮುಂದಾಗಿದ್ದೇವೆ. ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರದ ಅವಶ್ಯಕತೆ ಇದೆ ಎಂದರು.
ನಿವೃತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಮಾತನಾಡಿ ಕನಸವಾಡಿ ವ್ಯಾಪ್ತಿಯ ಸಹಕಾರಿ ಸಂಘದಿಂದ ನೀಡಲಾಗಿರುವ ನ್ಯಾಯಬೆಲೆ ಅಂಗಡಿ ಪರವಾನಗಿ ತೆರವುಗೊಳಿಸಿ ನಮ್ಮ ಸಹಕಾರಿ ಸಂಘದಿಂದ ನೀಡಿದರೆ ಹೆಚ್ಚು ಸೊಸೈಟಿ ಗೆ ಲಾಭ ಬರುತ್ತದೆ ಎಂದು ತಿಳಿಸಿದರು.
ನಿವೃತ ಬಿ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರಾದ ಜಿ ಕೆಂಪೇಗೌಡರು ಮಾತನಾಡಿ ಸಂಘವು ಉತ್ತಮ ಸೇವೆ ಸಲ್ಲಿಸುತ್ತಿದ್ದು ಒಂದು ವರ್ಷದಲ್ಲಿ ಉತ್ತಮ ಲಾಭಗಳಿಸಿ ಆದಷ್ಟು ಬೇಗ ತನ್ನ ಸ್ವಂತ ಕಟ್ಟಡ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ಸರ್ವಸದಸ್ಯರ ಸಭೆ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕ ಚುಂಚೇಗೌಡ, ಸಂಘದ ಉಪಾಧ್ಯಕ್ಷ ಮುನಿರತ್ನ, ನಿರ್ದೇಶಕರಾದ ತಿಮ್ಮರಾಜು, ಎಸ್ ಬಿ ಶಿವಕುಮಾರ್, ದಾಳಬೈಲಪ್ಪ, ರಾಮಕೃಷ್ಣಯ್ಯ, ಕೆ. ಕೃಷ್ಣಮೂರ್ತಿ,ಟಿ.ವಜೀರ್ ಸಾಹೇಬ್, ಜಿ. ಅನ್ನಪೂರ್ಣ, ಬಿ ಜಿ ಶಾಂತಮ್ಮ, ಮೇಲ್ವಿಚಾರಕ ಕೆ ಕೆ ಮಂಜುನಾಥ್, ಸಿಬ್ಬಂದಿ ಕೀರ್ತಿ ಸೇರಿದಂತೆ ಹಲವರು ಹಾಜರಿದ್ದರು.

