ತಮಟೆ ಹೊಡಿಯುವ ಮೂಲಕ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಬಗ್ಗೆ ಅರಿವು

News Desk
- Advertisement -  - Advertisement - 

ತಮಟೆ ಹೊಡಿಯುವ ಮೂಲಕ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಬಗ್ಗೆ ಅರಿವು

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ
2ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಕಸವನ್ನು ಕಸದ ಗಾಡಿಗೆ ಹಾಕದೆ ರಸ್ತೆಯ ಬದಿಯಲ್ಲಿ ಖಾಲಿ ಜಾಗಗಳಲ್ಲಿ ಕಸವನ್ನು ಹಾಕುವುದರ ವಿರುದ್ಧ ಅವರುಗಳ ಮನೆಯ ಮುಂದೆ ತಮಟೆ ಹೊಡೆಯುವ ಮೂಲಕ ಇಂದು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

- Advertisement - 

ಈ ಕುರಿತು ನಗರಸಭಾ ಸದಸ್ಯ ಎಸ್. ಪದ್ಮನಾಭ  ಮಾತನಾಡಿ ಪ್ರತಿ ದಿನ ಮನೆಗಳ ಮುಂದೆ ನಗರಸಭೆಯ ಕಸದ ಗಾಡಿ ಬಂದರೂ ಕಸವನ್ನು ಗಾಡಿಗೆ ಹಾಕದೆ ರಾತ್ರಿ ವೇಳೆ ರಸ್ತೆ ಬದಿಗಳಲ್ಲಿ ಕಸವನ್ನು ಹಾಕಿ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ.

ಅಂತಹವರನ್ನು ಗುರುತಿಸಿ ದಂಡವನ್ನು ಹಾಕಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ಮನೆಯ ಹಸಿಕಸ-ಒಣಕಸವನ್ನು ಬೇರೆ ಮಾಡಿ ಕಸದ ಗಾಡಿಗೆ ಹಾಕಬೇಕೆಂದು ಮನವಿ ಮಾಡಿದ್ದೇವೆ ಎಂದರು.

- Advertisement - 

 ಈ ಕಾರ್ಯಕ್ರದಲ್ಲಿ ಆರೋಗ್ಯಾಧಿಕಾರಿ ಕಾಂತರಾಜ್, ಸಮುದಾಯ ಸಂಘಟಕರಾದ ಸುಪ್ರೀತ. ಬಿ. ಮೇಸ್ತ್ರಿ ನಾರಾಯಣಪ್ಪ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

 

 

Share This Article
error: Content is protected !!
";