ಲಾಭದತ್ತ ದಾಪುಗಾಲ ಹಾಕಿದ ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘದ 2024 25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ಕಂದಿಕೆರೆ ಕೆ.ಜಗದೀಶ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಗಾಡಿ ಬಸಣ್ಣ ಬಡಾವಣೆಯಲ್ಲಿ ಅಯೋಜಿಸಿದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರೂ.3.30 ಕೋಟಿ ವಹಿವಾಟು ನಡೆಸಿದ್ದು ರೂ.78.210.ಲಕ್ಷ ಲಾಭ ಬಂದಿರುತ್ತದೆ.

- Advertisement - 

ಸಹಕಾರ ಸಂಘ ನಂಬಿಕೆ ಪ್ರಮಾಣಿಕೆತೆಯಿಂದ ನಡೆಸಿದಲ್ಲಿ ಮಾತ್ರ ಸಹಕಾರ ಸಂಘಗಳು ನಡೆಯುತ್ತವೆ ಮತ್ತು ಉಳಿಯುತ್ತವೆ ಎಂದು ಕಂದಿಕೆರೆ ಜಗದೀಶ್ ತಿಳಿಸಿದರು.

ಸರ್ಕಾರದ ಮತ್ತು ಸಹಕಾರ ಸಂಘದ ಅಧಿನಿಯಮಗಳ ಪ್ರಕಾರ ಭದ್ರತಾ ಠೇವಣಿ ಇಡಲಾಗಿದೆ. ಶೇರುದಾರ ಸದಸ್ಯರು ಸಂಘದಲ್ಲಿ ಠೇವಣಿ ಇಟ್ಟು ವಹಿವಾಟು ನಡೆಸುವಂತೆ ಸದಸ್ಯರಲ್ಲಿ ಅವರು ಮನವಿ ಮಾಡಿದರು.

- Advertisement - 

 ಸಂಘದಿಂದ ಎಲ್ಲಾ ಸಮುದಾಯದ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಂದಿನ ಭವಿಷ್ಯ ಉಜ್ವಲವಾಗಲಿ ನಿಮ್ಮ ಇಚ್ಚೆಯಂತೆ ಯಶಸ್ಸು ಉತ್ತುಂಗದ ಸ್ಥಾನಕ್ಕೆ ಹೋಗುವ ಶಕ್ತಿಯನ್ನು ನಮ್ಮ ಮಕ್ಕಳಿಗೆ ನೀಡಲಿ ಎಂದು ಭಗವಂತನಲ್ಲಿ  ಆಶಿಸುತ್ತೇನೆ ಎಂದರು.

ಈ ಸಭೆಯಲ್ಲಿ ಸಂಘದ ನಿರ್ದೇಶಕ ಯಳನಾಡು ಮನ್ಮಥ, ವಕೀಲರು ಶಿವಕುಮಾರ್, ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ವಿ ಕಲ್ಪನಾ, ಯಳನಾಡು ಶಾಂತರಾಜಯ್ಯ, ಎನ್ ರಾಧಾಕೃಷ್ಣನ್, ಹುಚ್ಚವನಹಳ್ಳಿ ಕುಮಾರಸ್ವಾಮಿ, ವಕೀಲರು ದಯಾನಂದ್ ಜೆ ಆರ್, ಅಜಯ್ ಕುಮಾರ್ ಕೆ, ಮಾನಸ ಮಂಜುನಾಥ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಬ್ಯಾಂಕಿನ ನಗದು ಗುಮಾಸ್ತ ಗುರು, ಪ್ರಭಾರ ಕಾರ್ಯದರ್ಶಿ ರಾಣಿ ಎಬಿ, ಸಂಘದ ಸರ್ವ ಸದಸ್ಯರು ಇದ್ದರು.

Share This Article
error: Content is protected !!
";