ನೆರೆ, ಮಳೆ ಹೇಳಿ ಬರುವುದಿಲ್ಲ, ಮುಂದಾಲೋಚನೆ, ದೂರದೃಷ್ಟಿ ಸರಕಾರಕ್ಕಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆರೆ, ಮಳೆ ಹೇಳಿ ಬರುವುದಿಲ್ಲ, ನಿಜ. ಈ ಪ್ರಾಕೃತಿಕ ವಿಕೋಪ ಪ್ರತೀ ವರ್ಷ ಮರುಕಳಿಸುತ್ತಿದೆ. ಆದರೆ; ಜನರು- ಜನಜೀವನವನ್ನು ರಕ್ಷಿಸುವ ಯಾವುದೇ ಮುಂದಾಲೋಚನೆ, ದೂರದೃಷ್ಟಿ ಸರಕಾರಕ್ಕಿಲ್ಲ. ʼಯುದ್ಧಕಾಲೇ ಶಸ್ತ್ರಾಭ್ಯಾಸʼ ಎಂಬಂತೆ ಆಡಳಿತಗಾರರು ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಜೆಡಿಎಸ್ ಟೀಕಿಸಿದೆ.

ಪ್ರಕೃತಿ ವಿಕೋಪಗಳ ಕುರಿತು ರಾಜಕೀಯ ಖಂಡಿತ ಕೂಡದು. ಆದರೆ, ಆಡಳಿತ ನಡೆಸುವವರ ಅಸಡ್ಡೆ-ಉಪೇಕ್ಷೆ ಸಹಿಸಲು ಸಾಧ್ಯವಿಲ್ಲ. ಕಲಬುರಗಿ ಸೇರಿ ಉತ್ತರದ ಎಲ್ಲಾ ಜಿಲ್ಲೆಗಳಲ್ಲಿ ಸಂಭವಿಸಿರುವ ಪರಿಸ್ಥಿತಿ ನೋಡಿದರೆ ಗಾಬರಿ ಆಗುತ್ತದೆ. ಹಳ್ಳಿಗಳಿಗೆ ಹಳ್ಳಿಗಳೇ ನದಿ ನೆರೆಗೆ ಸಿಕ್ಕಿ ಮುಳುಗಿವೆ. ಜಲಾವೃತಗೊಂಡ ಹಳ್ಳಿಗಳ ದೃಶ್ಯಗಳನ್ನು ಕಂಡರೆ ಮೈ ನಡುಗುತ್ತದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

- Advertisement - 

ಸರಕಾರ ತುರ್ತಾಗಿ ಇಷ್ಟನ್ನು ಮಾಡಲೇಬೇಕು-
ಭವಿಷ್ಯದಲ್ಲಿ ಈ ಎಲ್ಲಾ ನೆರೆಪೀಡಿತ ಗ್ರಾಮಗಳನ್ನು ರಕ್ಷಿಸಲು ಸಮಗ್ರ ಯೋಜನೆ ರೂಪಿಸಬೇಕು.

ಸರಕಾರ ಸಮರೋಪಾದಿಯಲ್ಲಿ ನೆರೆಪೀಡಿತರಿಗೆ ಆಹಾರ, ನೀರು, ಔಷಧಿ ಸೇರಿ ಇತ್ಯಾದಿ ತುರ್ತು ಸೌಲಭ್ಯಗಳನ್ನು ಕಲ್ಪಿಸಬೇಕು. ಗಂಜಿ ಕೇಂದ್ರಗಳನ್ನು ಕ್ಷಿಪ್ರವಾಗಿ ತೆರೆಯಬೇಕು.

- Advertisement - 

ಪರಿಕಾರ ಕಾರ್ಯಗಳಿಗೆ ಉಸ್ತುವಾರಿಗಳನ್ನಾಗಿ ಹಿರಿಯ ಸಚಿವರನ್ನು ನೇಮಿಸಿ, ಅವರ ಸಹಕಾರಕ್ಕೆ ದಕ್ಷ ಅಧಿಕಾರಿಗಳ ತಂಡಗಳನ್ನು ನಿಯೋಜಿಸಬೇಕು. ಬೆಳೆ ನಷ್ಟವನ್ನು ತುರ್ತಾಗಿ ಅಂದಾಜಿಸಿ ತತ್‌ ಕ್ಷಣವೇ ರೈತರಿಗೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

ಪ್ರಾಣ ನಷ್ಟ, ಜಾನುವಾರು-ಆಸ್ತಿ ನಷ್ಟ ಅನುಭವಿಸಿರುವ ಕುಟುಂಬಳಿಗೆ ಕೂಡಲೇ ಪರಿಹಾರ ನೀಡಿಮುಖ್ಯಮಂತ್ರಿಗಳು ತುರ್ತಾಗಿ ಇಷ್ಟೂ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ವತಃ ತಾವೇ ಇಡೀ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ ನಿರ್ವಹಿಸಬೇಕು ಎಂದು ಜೆಡಿಎಸ್ ತಾಕೀತು ಮಾಡಿದೆ.

Share This Article
error: Content is protected !!
";