ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಜವಾಹರ್ ನವೋದಯ ವಿದ್ಯಾಲಯ ಬಾಶೆಟ್ಟಿಹಳ್ಳಿ ಶಾಲೆಯಲ್ಲಿ ಮಕ್ಕಳು ಮತ್ತು ಉಪನ್ಯಾಸಕರು ಹಾಗೂ ಪೋಷಕರು ಓಡಾಡಲು ಕಷ್ಟವಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಸಂದೀಪ್ ರವರಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶ್ರೀ ಸಂದೀಪ್ ರವರು 4 ಲಕ್ಷದ 80ಸಾವಿರ ರೂಗಳ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಂಟಿಗಾನಹಳ್ಳಿ ಗ್ರಾಮದ ಯುವ ಮುಖಂಡರಾದ ವಿಜಯ್ಕುಮಾರ್ ಶಾಲೆಯ ಪ್ರಾಂಶುಪಾಲರಾದ ಟಿ.ಪಳನಿವೇಲು ದೈಹಿಕ ಶಿಕ್ಷಕ ರಾಮಾಂಜಿನಪ್ಪ .ಕೆ ಗುತ್ತಿಗೆದಾರಾದ ಮಂಜು ಮತ್ತು ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು

