ಡಿ.ಕೆ ಶಿವಕುಮಾರ ನೀವೇನೂ ಉಪಮುಖ್ಯಮಂತ್ರಿಯೋ? ಅಥವಾ ರಿಯಲ್‌ ಎಸ್ಟೇಟ್‌ ಏಜಂಟೋ?

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿ.ಕೆ ಶಿವಕುಮಾರ ನೀವೇನೂ ಉಪಮುಖ್ಯಮಂತ್ರಿಯೋ? ಅಥವಾ ರಿಯಲ್‌ಎಸ್ಟೇಟ್‌ಏಜಂಟೋ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಸ್ವಾರ್ಥಕ್ಕಾಗಿ ರೈತರ ಜಮೀನುಗಳನ್ನು ಕಬಳಿಸಲು ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿದ್ರಿ. BBMP 5 ಹೋಳು ಮಾಡಿ ಗ್ರೇಟರ್‌ಬೆಂಗಳೂರು ಮಾಡಿದ್ದಾಯ್ತು.

- Advertisement - 

ಈಗ ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್‌ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಿಕೊಳ್ಳಲು ಹೊರಟಿದ್ದೀರಿ ಏಕೆ ಎಂದು ಜೆಡಿಎಸ್ ಪ್ರಶ್ನಿಸಿದೆ.

ಇದೆಲ್ಲದರ ಹಿಂದಿನ ನಿಮ್ಮ ಅಜೆಂಡಾವಾದರೂ ಏನು? ನಿಮ್ಮ ಸಂಬಂಧಿಕ ರಾಜಕಾರಣಿಗಳಿರುವ ಕ್ಷೇತ್ರಗಳನ್ನು ಬೆಂಗಳೂರಿಗೆ ಸೇರಿಸಿ, ನಿಮ್ಮ ಕುಟುಂಬದ ಬೇನಾಮಿ ಆಸ್ತಿಗಳ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ದೂರಾಲೋಚನೆಯೇ ? ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

- Advertisement - 

 

Share This Article
error: Content is protected !!
";