ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಾಲ್ಲೂಕಿನ ಅಗಸರಹಳ್ಳಿ ಗ್ರಾಮಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಕಾಣೆಯಾದ ಕುರಿತು 2025 ಜುಲೈ 13 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಫಾರೂಕ್ ತಂದೆ ರಜಾಕ್ ಸಾಬ್ (35), ಪತ್ನಿ ಅಪ್ರಿನ್ ತಾಜ್ (33), ಮಕ್ಕಳಾದ ಮಹಮ್ಮದ್ ಅಲಿ (10) ಷಹಜೀಯಾ (8) ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಮಂಡಕ್ಕಿ ಭಟ್ಟಿ ಏರಿಯಾದಲ್ಲಿ ವಾಸವಾಗಿದ್ದರು. 2025 ಜೂನ್ 12 ರಿಂದ ಕಾಣೆಯಾಗಿದ್ದಾರೆ.
ಮಹಮ್ಮದ್ ಗಾರೆ ಕೆಲಸ ಮಾಡುತ್ತಿದ್ದು, 5.8 ಅಡಿ ಎತ್ತರ ದುಂಡು ಮುಖ, ಧೃಡಕಾಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದಾರೆ. ಅಪ್ರಿನ್ತಾಜ್ ಮನೆ ಕೆಲಸ ಮಾಡುತ್ತಿದ್ದು, 5.4 ಅಡಿ ಎತ್ತರವಿದ್ದು ಕೊಲುಮುಖ, ಸಾದಾರಣ ಮೈ ಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾರೆ. ಮಹಮ್ಮದ್ ಅಲಿ ಬಾಲಕನಾಗಿದ್ದು 3.5 ಅಡಿ ಎತ್ತರವಿದ್ದು, ದುಂಡುಮುಖ, ಸಾದರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾನೆ. ಷಹಜೀಯಾ ಬಾಲಕಿಯಾಗಿದ್ದು 3 ಅಡಿ ಎತ್ತರವಿದ್ದು, ದುಂಡುಮುಖ, ಸಾದಾರಣ ಮೈಕಟ್ಟು ಗೋಧಿ ಮೈಬಣ್ಣ ಹೊಂದಿದ್ದಾಳೆ.
ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-222933, 9480803145, ಪೊಲಿಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430, 9480803120 ಹಾಗೂ ಕಂಟ್ರೋಲ್ ರೂಂ ಸಂಖ್ಯೆ 08194-222782ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

