ಬನ್ನಿಮಂಟಪದಲ್ಲಿ ದಸರಾ ಸಂಭ್ರಮ: ಅಂಬು ಕಡಿದು ಉತ್ಸವಕ್ಕೆ ತೆರೆ ಎಳೆದ ಭಕ್ತರು

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗ್ರಾಮದೇವರುಗಳಾದ ಶ್ರೀವೀರಭದ್ರಸ್ವಾಮಿ, ಚಳ್ಳಕೆರೆಯಮ್ಮ ಮತ್ತು ಉಡಲಸಮ್ಮ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವ ವಿಜೃಂಭಣೆಯಿಂದ ಸಂಪನ್ನವಾಯಿತು.

ಬನ್ನಿಮಂಟಪಕ್ಕೆ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ, ಶ್ರೀಚಳ್ಳಕೆರೆಯಮ್ಮ, ಶ್ರೀಉಡಸಲಮ್ಮ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಗ್ರಾಮದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಬನ್ನಿಮಂಟಪಕ್ಕೆ ಆಗಮಿಸಿ ಮೂರು ದೇವರುಗಳ ಸಮಾಗಮವನ್ನು ವೀಕ್ಷಿಸಿ ಸಂತಸ ಪಟ್ಟರಲ್ಲದೆ, ಅಂಬುಕತ್ತರಿಸುವ ಕಾರ್ಯದಲ್ಲಿ ಪಾಲ್ಗೊಂಡರು.

- Advertisement - 

ಕಳೆದ ಒಂಭತ್ತು ದಿನಗಳಿಂದ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜಾಪುನಸ್ಕಾರಗಳು ಯಶಸ್ವಿಯಾಗಿ ನಡೆದಿದ್ದು,

ಗುರುವಾರ ಸಂಜೆ ಸುಮಾರು ೫.೩೩ರ ಸಮಯದಲ್ಲಿ ಬಳ್ಳಾರಿ ರಸ್ತೆಯ ಬನ್ನಿಮಂಟಪದ ಮೈದಾನದಲ್ಲಿ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ, ಶ್ರೀಚಳ್ಳಕೆರೆಯಮ್ಮ, ಶ್ರೀಉಡಸಲಮ್ಮ ದೇವರುಗಳ ಸಮ್ಮುಖದಲ್ಲಿ ಪುರಂತಪ್ಪನ ವೀರನಾಟ್ಯದೊಂದಿಗೆ ಅಂಬು ಕತ್ತರಿಸುವ ಮೂಲಕ ವೈಭವದ ದಸರಾಕ್ಕೆ ತೆರೆ ಎಳೆಯಲಾಯಿತು. ಸಹಸ್ರಾರು ಭಕ್ತಾಧಿಗಳ ಜೈಯಕಾರ ಹಾಕಿದರು.

- Advertisement - 

ಪ್ರತಿವರ್ಷದಂತೆ ಈ ವರ್ಷವೂ ಬನ್ನಿಮಂಟಪದ ಸುತ್ತ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ನವರಾತ್ರಿ ಉತ್ಸವಕ್ಕೆ ಚೈತನ್ಯತುಂಬಿದರು. ಪದ್ದತಿಯಂತೆ ಭವ್ಯವಾದ ಮೆರವಣಿಗೆಯಲ್ಲಿ ಮೊದಲು ಬಸವಣ್ಣ, ಪುರಂತಪ್ಪ, ಚಳ್ಳಕೆರೆಯಮ್ಮ, ಉಡಸಲಮ್ಮ, ವೀರಭದ್ರಸ್ವಾಮಿ ದೇವರಗಳು ಭಕ್ತರ ಜೈಯಕಾರದೊಂದಿಗೆ ಸಾಗಿದವು. ದಾರಿಯುದ್ದಕ್ಕೂ ಜನರು ದೇವರ ದರ್ಶನ ಪಡೆದು ಕೈಮುಗಿದು ಪ್ರಾರ್ಥಿಸಿದರು.

ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿ, ಸದಸ್ಯರಾದ ಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಟಿ.ಪ್ರಭುದೇವ್, ಡಾ.ಎಸ್.ಡಿ.ಲೋಕೇಶ್, ಕೆ.ಎಂ.ಕೋಟ್ರೇಶ್, ಶಿವಕುಮಾರ್, ಕೆ.ಎಂ.ಅರವಿಂದ್, ತರಕಾರಿಮಂಜಣ್ಣ, ಡಿ.ಎಂ.ತಿಪ್ಪೇಸ್ವಾಮಿ, ಪೂಜಾರಾದ ಶಿವಕುಮಾರಸ್ವಾಮಿ, ವೀರೇಶ್, ರುದ್ರೇಶ್ ಮುಂತಾದವರು ಭಾಗವಹಿಸಿದ್ದರು.

 

Share This Article
error: Content is protected !!
";