ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ 2025-26 ನೇ ಸಾಲಿಗೆ ಐಟಿಇಪಿ, ಬಿಎಸ್ಸಿ. ಬಿಇಡಿ ಹಾಗೂ ಬಿಬಿಎ ಕೋರ್ಸ್‍ಗಳಿಗಾಗಿ ಸಹಾಯಕ ಪ್ರಾಧ್ಯಾಪಕರ (ಶೈಕ್ಷಣಿಕ ಅಧ್ಯಯನಗಳು) ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಯ ಅವಧಿಯು 2025-26 ರ ಶೈಕ್ಷಣಿಕ ವರ್ಷ ಅಥವಾ ಖಾಯಂ ಉಪನ್ಯಾಸಕರ ನೇಮಕಾತಿ ಅದರಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಇರುತ್ತದೆ.
ಸಹಾಯಕ ಪ್ರಾಧ್ಯಾಪಕರು (ಶೈಕ್ಷಣಿಕ ಅಧ್ಯಯನಗಳು) ಹುದ್ದೆಗೆ ಕನಿಷ್ಟ ಶೇಕಡ 55 ಅಂಕಗಳೊಂದಿಗೆ ಎಂ.ಎಡ್ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಂ.ಎಡ್‍ನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ರಾಜ್ಯ ಅರ್ಹತಾ ಪರೀಕ್ಷೆ ಅಥವಾ ಪಿಹೆಚ್ ಡಿ ಮಾಡಿರಬೇಕು ಅಥವಾ ವಿಶ್ವವಿದ್ಯಾಲಯದ ಅನುದಾನದಿಂದ ಸೂಚಿಸಲಾದ ಯಾವುದೇ ಇತರೆ ಅರ್ಹತೆ ಹೊಂದಿರಬೇಕು. ತತ್ವಶಾಸ್ತ್ರ ಅಥವಾ ಸಮಾಜಶಾಸ್ತ್ರ ಅಥವಾ ಮನೋವಿಜ್ಞಾನ ಅಥವಾ ಅವುಗಳ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಬಿಬಿಎ ಸಹಾಯಕ ಪ್ರಾಧ್ಯಾಪಕರು- 01 ಹುದ್ದೆಗೆ ಕಾಮರ್ಸ್‍ನಲ್ಲಿ (ಎಂ.ಕಾಂ) ಅಥವಾ ನಿರ್ವಹಣೆಯಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ರಾಜ್ಯ ಅರ್ಹತಾ ಪರೀಕ್ಷೆ ಅಥವಾ ಕಾಮಸ್ ಅಥವಾ ನಿರ್ವಹಣೆಯಲ್ಲಿ ಪಿಹೆಚ್ ಡಿ ಮಾಡಿರಬೇಕು.
ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳು ಹಾಗೂ ಮೂಲದಾಖಲೆಗಳ ಎರಡು ಜೆರಾಕ್ಸ್ ಪ್ರತಿಗಳು ಮತ್ತು ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ, ಅಕ್ಟೋಬರ್ 10 ರಂದು ಬೆಳಿಗ್ಗೆ 11.00 ಗಂಟೆಗೆ ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಮುಂಗಡವಾಗಿ ಕಳುಹಿಸಬಾರದು.
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು ಮತ್ತು ಸಂದರ್ಶನಕ್ಕೆ ಹಾಜರಾಗಲು ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಈ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಮಯದಲ್ಲಿ ಯಾವುದೇ ಕಾರಣ ತಿಳಿಸಿದೇ ಕರ್ತವ್ಯದಿಂದ ಬಿಡುಗಡೆ ಮಾಡುವ ಅಧಿಕಾರ ನೃಪತುಂಗ ವಿಶ್ವವಿದ್ಯಾಲಯಕ್ಕೆ ಇರುತ್ತದೆ ಹಾಗೂ ಈ ನೇಮಕಾತಿ ವಿಶ್ವವಿದ್ಯಾಲಯದಲ್ಲಿ ನೇರ ನೇಮಕಾತಿಗಾಗಿ ಯಾವುದೇ ರೀತಿಯ ಹಕ್ಕಿಗೆ ಒಳಪಟ್ಟಿರುವುದಿಲ್ಲ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

