ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಮೀಕ್ಷೆಯ ಕಳ್ಳಾಟಗಳು ಮತ್ತೊಮ್ಮೆ ಬಯಲಾಗಿದೆ. ಹಲವು ಕಡೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಜಾತಿ ಗಣತಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಜ್ಯಾತಿವ್ಯಾದಿ ಸಿದ್ದರಾಮಯ್ಯ ಅವರೇ, ಇಂತಹ ಕಾಟಾಚಾರದ ಸಮೀಕ್ಷೆಯಿಂದ ಏನು ಪ್ರಯೋಜನಾ? ತರಬೇತಿ ಪಡೆದಿರುವ ಗಣತಿದಾರರನ್ನು ಬಳಸಿಕೊಳ್ಳದೇ, ಆಟ ಆಡುವ ಮಕ್ಕಳ ಕೈಯಲ್ಲಿ ಸಮೀಕ್ಷೆ ಮಾಡಿಸಿದರೇ, ಜನಸಾಮಾನ್ಯರಿಂದ ನೈಜ ಮಾಹಿತಿ ಸಂಗ್ರಹಿಸಲು ಸಾಧ್ಯವೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿಸಿದ ಸುಳ್ಳು ತುಂಬಿದ ರೆಡಿಮೇಡ್ ಜಾತಿಗಣತಿ ವರದಿಯಂತೆ, ಈಗ ಮಾಡಿಸುತ್ತಿರುವ ಜಾತಿಗಣತಿಯೂ ಕಸದ ಬುಟ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸ್ವಾರ್ಥಕ್ಕಾಗಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರ ನೂರಾರು ಕೋಟಿ ರೂ. ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಜೆಡಿಎಸ್ ಹರಿಹಾಯ್ದಿದೆ.

