ವಿಶ್ವದರ್ಜೆಯ ಟ್ರಾನ್ಸ್ ಫಾರ್ಮರ್ ಗಳಿಗೆ ಹೆಸರಾದ NGEF

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಖನಿಜ ಭವನದಲ್ಲಿ ಈ ದಿನ ಹುಬ್ಬಳ್ಳಿ
#NGEF ಕಾರ್ಖಾನೆಯ ಆಡಳಿತ ಮಂಡಳಿಯ ಸಭೆ ನಡೆಸಿದೆ. ವಿಶ್ವದರ್ಜೆಯ, ದೀರ್ಘ ಬಾಳಿಕೆಯ ಟ್ರಾನ್ಸ್ ಫಾರ್ಮರ್ ಗಳಿಗೆ ಹೆಸರುವಾಸಿಯಾಗಿರುವ NGEF ಕಳೆದ 2 ವರ್ಷಗಳಿಂದಲೂ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

NGEF ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹಣಕಾಸಿನ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ NGEFಗೆ ಬಾಕಿ ಪಾವತಿಗಳನ್ನು ಶೀಘ್ರದಲ್ಲೇ ನೀಡುವಂತೆ ನಿರ್ದೇಶನ ನೀಡಿದೆ ಎಂದು ಸಚಿವರು ತಿಳಿಸಿದರು.

- Advertisement - 

NGEF ನ ಮುಂದಿನ ಹಂತಕ್ಕೆ ಸಾಗುವ ದೃಷ್ಟಿಯಿಂದ ಇಂದಿನ ಸಭೆ ಅತ್ಯಂತ ಮಹತ್ವದ್ದು.
MSIL & NGEF: ಮುಂದಿನ ಹಂತದ ಸಾಧನೆಗೆ ಸಜ್ಜು!

ಸರಕಾರಿ ಸ್ವಾಮ್ಯದ #MSILChits ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಲಿದ್ದೇವೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ನೂತನ ಯೋಜನೆಗೆ ಚಾಲನೆ ನೀಡಲಿದ್ದು, ಹೊಸ ಪ್ಲಾನ್  ಗಳ ಘೋಷಣೆ ಕೂಡ ನಡೆಯಲಿದೆ.

- Advertisement - 

ಕೇರಳ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ವಾರ್ಷಿಕ 500 ಕೋಟಿ ವಹಿವಾಟನ್ನು 10,000 ಕೋಟಿಗೆ ವಿಸ್ತರಿಸುವ ಗುರಿ! ಹೊಂದಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಹುಬ್ಬಳ್ಳಿಯ NGEF ಈಗಾಗಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ನೂತನ ಪಾರ್ಲಿಮೆಂಟ್ ಭವನದಿಂದ ಆಫ್ರಿಕಾದವರೆಗೂ ನಮ್ಮ ಟ್ರಾನ್ಸ್ಫಾರ್ಮರ್ ಗಳು ಶಕ್ತಿ ತುಂಬುತ್ತಿವೆ.

ಜಪಾನ್ ಪ್ರವಾಸದ ವೇಳೆ JFE ಕಂಪೆನಿಯೊಂದಿಗೂ ಮಾತುಕತೆ ನಡೆಸಿದ್ದೇವೆ. ಎಲ್ಲಾ ಅವಕಾಶಗಳನ್ನು ಬಳಸಿಕೊಂಡು #NGEF ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಸಚಿವರು ತಿಳಿಸಿದರು.

 

 

 

 

Share This Article
error: Content is protected !!
";