ಆಸ್ಪತ್ರೆ ವಿರುದ್ಧ ಅಪ ಪ್ರಚಾರ ಡಾ. ಅರ್ಜುನ್ ವಿರುದ್ಧ ದೂರು-ಡಾ. ವೆಂಕಟೇಶ್ ಪ್ರಸಾದ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹೀಲಿನ್ ಆಸ್ಪತ್ರೆ ವಿರುದ್ಧ ಡಾ. ಎಂ. ಬಿ. ಅರ್ಜುನ್ ಎಂಬುವರು ವಾಟ್ಸ್ ಆಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅಪ ಪ್ರಚಾರಗಳನ್ನು ಮಾಡುತ್ತಿದ್ದಾರೆಂದು ಡಾ. ವೆಂಕಟೇಶ್ ಪ್ರಸಾದ್ ಹೇಳಿದರು.

ನಗರದಲ್ಲಿ ನೂತನವಾಗಿ ಪ್ರಾರಂಭಿಸುತ್ತಿರುವ ಹೀಲಿನ್ ಆಸ್ಪತ್ರೆಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಡಾ. ವೆಂಕಟೇಶ್ ಪ್ರಸಾದ್ ಮಾತನಾಡಿ ಹಿಂದೆ ಇದೇ ಕಟ್ಟಡದಲ್ಲಿ ಪ್ರಾರಂಭಿಸಿದ್ದ ಸೆವೆನ್ ಹಿಲ್ಸ್ ಆಸ್ಪತ್ರೆಯು ಕಾರಣಾಂತರಗಳಿಂದ ಮುಚ್ಚಿದ್ದು ಈಗ ನಾವು ಇದೇ ಕಟ್ಟಡದಲ್ಲಿ ಕಾಣುನಾತ್ಮಕವಾಗಿ ಪರವಾನಗಿ ಪಡೆದು ಹೀಲಿನ್ ಎಂಬ ಹೆಸರಿನ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ.

- Advertisement - 

ಇದೇ ತಿಂಗಳ 15ರಂದು ಆಸ್ಪತ್ರೆ ಉದ್ಘಾಟನೆ ಯಾಗಲಿದೆ. ವಸ್ತು ಸ್ಥಿತಿ ಹೀಗಿರುವಾಗ ನಮ್ಮ ಆಸ್ಪತ್ರೆಯ ಭಾವಚಿತ್ರವನ್ನು ಹಾಕಿ ಕೆಲವರು ದುರುದ್ದೇಶ ಪೂರ್ವಕವಾಗಿ ಅಪ ಪ್ರಚಾರ ಮಾಡುತ್ತಿದ್ದಾರೆ. ಇದರ ನೇರ ಹೊಣೆ ಡಾ. ಅರ್ಜುನ್ ರವರೇ ಆಗಿದ್ದಾರೆ. ಡಾ. ಅರ್ಜುನ್ ರವರಿಗೂ ಹೀಲಿನ್ ಆಸ್ಪತ್ರೆಗೂ ಸಂಬಂಧವಿಲ್ಲ. ಆದರೂ ಕೂಡಾ ವ್ಯವಸ್ಥಿತ ಪಿತೂರಿ ನಡೆಸಿ ಅಪ ಪ್ರಚಾರ ಮಾಡಲಾಗುತ್ತಿದೆ.

ಹೀಲಿನ್ ಆಸ್ಪತ್ರೆಯ ಹೆಸರು ಇಡೀ ದೇಶದಲ್ಲಿ ಎಲ್ಲೂ ಇಲ್ಲ. ಇದರ ಹೆಸರಲ್ಲಿ ಟ್ರೇಡ್ ಮಾರ್ಕ್ ಸಹ ಪಡೆಯಲಾಗಿದೆ. ಹೀಗಿರುವಾಗ ಆಸ್ಪತ್ರೆಯ ಭಾವ ಚಿತ್ರವನ್ನು ತೆಗೆದು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದಕ್ಕೆ ಕಾರಣರಾದ ಡಾ. ಅರ್ಜುನ್ ವಿರುದ್ಧ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಳಿಸಲಾಗಿದೆ.

- Advertisement - 

ನಾನು ಮೂಲತಹ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿಯವನು. ನನ್ನ ತಂದೆ ರಾಜಣ್ಣ ತಾಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿದ್ದವರು. ನಾನು ಉತ್ತಮ ಕುಟುಂಬದಿಂದ ಬಂದವನು. ತಂದೆ ತಾಯಿ ಹಾಗೂ ಹಿರಿಯರ ಅಣತಿಯಂತೆ ನಡೆದವನು.

ನಾನೊಬ್ಬ ಡಾಕ್ಟರ್ ಆಗಿ ದೊಡ್ಡಬಳ್ಳಾಪುರ ಸಾರ್ವಜನಿಕರ, ಬಡಜನತೆಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ನೂತನ ಆಸ್ಪತ್ರೆಯನ್ನು ಪ್ರಾರಂಭಿಸಿ ದಿನದ 24ಗಂಟೆಗಳ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದು ಫಾರ್ಮಸಿ, ಅಪಘಾತ, ಟ್ರಾಮ ಆರ್ಥೋ ಪೆಡಿಕ್ ನ್ಯೂರೋ ವಿಭಾಗಗಳಿರುತ್ತವೆ. ಜೊತೆಗೆ ಮಾತೃತ್ವ ಮಕ್ಕಳ ಆರೈಕೆ ಘಟಕಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ಹೇಳಿದರು.

 

 

 

Share This Article
error: Content is protected !!
";