ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪವರ್‌ಶೇರಿಂಗ್‌ಬಗ್ಗೆ ಹಾದಿ ಬೀದಿಲಿ ನಾಲಿಗೆ ಹರಿಬಿಟ್ಟು ಪದೇ ಪದೇ ಶಿಸ್ತು ಉಲ್ಲಂಘಿಸುತ್ತಿರುವವರಿಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊಡುತ್ತಿರುವ ನೋಟಿಸ್ʼಗಳು ಟಿಶ್ಯೂ ಪೇಪರ್ʼಗಿಂತ ಕಡೆಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಶಿಸ್ತು ಉಲ್ಲಂಘನೆಯ ಕಾರಣದ ನೆಪವೊಡ್ಡಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಕೆ.ಎನ್. ರಾಜಣ್ಣ ಅವರನ್ನು ರಾತ್ರೋರಾತ್ರಿ ಮಂತ್ರಿಗಿರಿಯಿಂದ ಉಚ್ಛಾಟನೆ ಮಾಡಿದ್ರಿ. ಅವರಿಗೆ ಒಂದು ನ್ಯಾಯ, ಉಳಿದವರಿಗೆ ಒಂದು ನ್ಯಾಯ?
ಡಿಕೆಶಿ ಅವರೇ ನಾನು ನೋಟೀಸ್‌ಕೊಡ್ತೀನಿ, ನೀನು ತಗೋ ಎನ್ನುವ “ನೋಟಿಸ್‌ಡ್ರಾಮಾ” ಆಡುವುದನ್ನು ಬಿಟ್ಟು, ಶಿಸ್ತು ಉಲ್ಲಂಘನೆ ಮಾಡಿರುವ ಶಾಸಕರಾದ ರಂಗನಾಥ್, ಹೆಚ್.ಸಿ.ಬಾಲಕೃಷ್ಣ, ಇಕ್ಬಾಲ್‌ಹುಸೇನ್‌ಅವರನ್ನು ಮೊದಲು ಉಚ್ಛಾಟನೆ ಮಾಡಿ ನಿಮ್ಮ ದಮ್ಮು, ತಾಕತ್ತು ತೋರಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

