ದಿವ್ಯಶ್ರೀ ಮತ್ತು ಪ್ರಕೃತಿ ಇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದ ದಾಂಡಿಯಾ ನೈಟ್ಸ್..

News Desk

ಹಿರಿಯೂರು ನಗರಕ್ಕೂ ಕಾಲಿಟ್ಟ ಗುಜರಾತಿ ದಾಂಡಿಯಾ ನೈಟ್ಸ್..
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನವರಾತ್ರಿ ಸಂದರ್ಭದಲ್ಲಿ ಗುಜರಾತ್ ರಾಜ್ಯಾದ್ಯಂತ ಅದ್ಧೂರಿಯಾಗಿ ನಡೆಯುವ ದಾಂಡಿಯಾ ನೈಟ್ಸ್ ಸಾಂಸ್ಕೃತಿಕ ಕಾರ್ಯಕ್ರಮ ಹಿರಿಯೂರು ನಗರಕ್ಕೂ ಕಾಲಿಟ್ಟು ಜನಮನ ಗೆದ್ದಿತು.

ದಸರಾ ಹಬ್ಬದ ಪ್ರಯುಕ್ತ ಹಿರಿಯೂರಿನ ಬಬ್ಬೂರು ಸಮೀಪದಲ್ಲಿರುವ ವೈಟ್ ವಾಲ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಡಿಪಿ ಈವೆಂಟ್‌ಗಳು ಇವರ ಕಡೆಯಿಂದ ದಾಂಡಿಯಾ ನೈಟ್ಸ್ ಎಂಬ ಕಾರ್ಯಕ್ರಮವು ಅದ್ದೂರಿಯಾಗಿ ಮೂಡಿಬಂದಿತು.
ದಾಂಡಿಯಾ ನೈಟ್ಸ್ ಕಾರ್ಯಕ್ರಮವು ದಿವ್ಯಶ್ರೀ ಮಂಜುನಾಥ ಮತ್ತು ಪ್ರಕೃತಿ ಗುರುಪ್ರಸಾದ್ ಇವರ ನೇತೃತ್ವದಲ್ಲಿ ಅಮೋಘವಾಗಿ ಮೂಡಿಬಂದಿತು.

- Advertisement - 

ದಾಂಡಿಯಾ ನೈಟ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೇಕ್ಷಕರು ನೃತ್ಯ, ಸಂಗೀತ ಹಾಗೂ ಮನರಂಜನೆ ಕಾರ್ಯಕ್ರಮದಲ್ಲಿ ತುಂಬಾ ಉತ್ಸಾಹ ಭರಿತರಾಗಿ ಪಾಲ್ಗೊಂಡರು.

- Advertisement - 

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ ರಮೇಶ್, ಬಿಜೆಪಿ ಮಂಡಲ್ ಅಧ್ಯಕ್ಷ ಅಭಿನಂದನ್, ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಬ್ರಿಜೇಶ್ ಯಾದವ್, ಯೂತ್ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಮಿಸ್ ಇಂಡಿಯಾ ಆಫ್ ತ್ರಿಪುರ –2022 ಹೃತ್ವಿಕಾ ಮಜುಂದಾರ್, ಸ್ಟೀಫನ್ ರಾಯ್, ಕಿಸಾನ್ ಮತ್ತು ಖೇತ್ ಮಜ್ದೂರ್, ಕಾಂಗ್ರೆಸ್ ಯೂತ್ ಜನರಲ್ ಸೆಕ್ರೆಟರಿ ಶಾಹಿದ್ ಇವರುಗಳಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಪ್ರಾಯೋಜಕರುಗಳಾದ ವೈಟ್ ವಾಲ್ ವಿಶ್ವನಾಥ್, ಈವೆಂಟ್ ಮಾಂತ್ರಿಕ ಪ್ರದೀಪ್, ದಿಲ್ದಾರ್ ಸೌಂಡ್ಸ್ ಮತ್ತು ಲೈಟಿಂಗ್ಸ್  ಮಕಾದರ್, ದೃಶ್ಯ ಸೆರೆಹಿಡಿಯುವ ಸಿಬ್ಬಂದಿ ಮತ್ತು ಛಾಯಾಗ್ರಹಣ ಅಭಿಷೇಕ್, ರಾಕ್ ಡ್ಯಾನ್ಸರ್ ಸಿಬ್ಬಂದಿ ವಿ.ಅಜಿತ್, ಶ್ರೀ ಶಾರದಾ ಸ್ಪೋರ್ಟ್ಸ್ ರಾಮಕೃಷ್ಣ, ಪ್ರಾಂಶುಪಾಲ ಸಂದೀಪ್ ಯಾದವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಏನಿದು ದಾಂಡಿಯಾ ನೈಟ್ಸ್-
ದಾಂಡಿಯಾ ನೈಟ್ಸ್ ಎಂದರೆ ದಾಂಡಿಯಾ ನೃತ್ಯಗಳನ್ನು ನಡೆಸುವ ರಾತ್ರಿ ಕಾರ್ಯಕ್ರಮಗಳು.
ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ರೀತಿಯ ನೃತ್ಯಗಳನ್ನು ಆಯೋಜಿಸಲಾಗುತ್ತದೆ. ಇಂಥಹ ಕಾರ್ಯಕ್ರಮಗಳಲ್ಲಿ ಲೈವ್ ಸಂಗೀತ, ಡಿಜೆ ಸೌಂಡ್ಸ್ ಮತ್ತು ಆಹಾರ ಒಳಗೊಂಡಿರುತ್ತದೆ.

ಅತಿಮುಖ್ಯವಾಗಿ ಇಂಥಹ ಉತ್ಸವಗಳಲ್ಲಿ ಜನರು ಜೋಡಿಗಳಾಗಿ ತಮ್ಮ ಕೈಗಳಲ್ಲಿ ದಾಂಡಿಯಾ ಎಂದರೆ ಕಡ್ಡಿಗಳ ಸಹಾಯದಿಂದ ದಸರಾ ಸಂಪ್ರದಾಯದ ಪ್ರಕಾರ ನೃತ್ಯ ಮಾಡುತ್ತಾರೆ.
ಸಾಂಪ್ರದಾಯಿಕ ನೃತ್ಯ: ದಾಂಡಿಯಾ ನೃತ್ಯವು ಗುಜರಾತ್‌ನ ಪ್ರಮುಖ ನೃತ್ಯ ಪ್ರಕಾರವಾಗಿದ್ದು
ನವರಾತ್ರಿ ಹಬ್ಬದ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ದಾಂಡಿಯಾ ನೈಟ್ಸ್ ಕಾರ್ಯಕ್ರಮಗಳಲ್ಲಿ ಲೈವ್ ಬ್ಯಾಂಡ್‌ಗಳು, ಡಿಜೆಗಳು ಮತ್ತು ಸಂಗೀತದೊಂದಿಗೆ ನೃತ್ಯ ಮಾಡಲಾಗುತ್ತದೆ.

ಆಹಾರ ಮತ್ತು ಪಾನೀಯ: ವಿವಿಧ ಬಗೆಯ ಆಹಾರ ಮತ್ತು ಪಾನೀಯಗಳನ್ನು ಒದಗಿಸಲಾಗುತ್ತದೆ. ಇದು ಕಾರ್ಯಕ್ರಮಕ್ಕೆ ರುಚಿಕರವಾದ ಅನುಭವ ನೀಡುತ್ತದೆ. ದಾಂಡಿಯಾ ನೈಟ್ಸ್ ಸಾಮಾನ್ಯವಾಗಿ ಸಮುದಾಯದವರು ಒಟ್ಟಿಗೆ ಸೇರಿ ಆಚರಿಸುವ ದೊಡ್ಡ ಸಮಾರಂಭಗಳಾಗಿವೆ. ಈ ಮೂಲಕ ಸಮುದಾಯಗಳ ಸಂಘಟನೆಗೆ ಒತ್ತು ನೀಡಿ ಜನರು ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ.

ದಾಂಡಿಯಾ ವಿವಾದ: ದಸರಾ ಸಮಯದಲ್ಲಿ ಕೆಲವು ಕಡೆಗಳಲ್ಲಿ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯಗಳು ನಡೆಯುತ್ತಿವೆ ಎಂದು ಕೆಲವು ಹಿಂದೂ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಇದು ವಿವಾದಕ್ಕೆ ಕಾರಣವಾಗಿದ್ದು ಅಪಸ್ವರಗಳು ಕೇಳಿ ಬಂದಿವೆ.

 

Share This Article
error: Content is protected !!
";