ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಂದ ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಟಾರ್ ಬೈಕ್‌ಗಳ ಕಳ್ಳತನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಹಿರಿಯೂರಿನ ಆದಾಜ್‌ನಗರ ನಿವಾಸಿ ಮಹಮ್ಮದ್ ಶರೀಫ್(೩೫) ಎಂಬ ಬೈಕ್ ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಗುರುಪಡಿಸಿ ೧೧ ಪ್ರಕರಣ ಪತ್ತೆಹಚ್ಚಿದ್ದಲ್ಲದೆ, ೧.೪೦ ಲಕ್ಷ ಮೌಲ್ಯದ 34 ಮೋಟಾರ್ ಬೈಕ್ ವಶಪಡಿಸಿಕೊಳ್ಳುವ ಮೂಲಕ ಬಾರಿ ಪ್ರಮಾಣದ ಬೈಕ್ ಕಳ್ಳತನವನ್ನು ಪತ್ತೆಹಚ್ಚಿ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಇನ್ಸ್‌ಪೆಕ್ಟರ್ ಕೆ.ಕುಮಾರ್ ಮಾಹಿತಿ ನೀಡಿ, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್, ಪ್ರಭಾರ ಡಿವೈಎಸ್ಪಿ ಉಮೇಶ್ ಈಶ್ವರ ನಾಯ್ಕ, ನೂತನ ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಪ್ರಕರಣ ಪತ್ತೆ ಹಚ್ಚಿ ಬೈಕ್‌ಗಳನ್ನು ಕಳ್ಳನಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.
ಚಳ್ಳಕೆರೆ ಪೊಲೀಸ್ ಠಾಣಾವ್ಯಾಪ್ತಿ-೬, ಹೊಸದುರ್ಗ-೪, ಹೊಳಲ್ಕೆರೆ-೨ ಚಿತ್ರದುರ್ಗ ನಗರ ಠಾಣೆ-೨ ಚಿತ್ರದುರ್ಗ ಬಡಾವಣೆ-೦೧, ಹಿರಿಯೂರು ನಗರಠಾಣೆ-೦೧, ತುಮಕೂರು ಜಿಲ್ಲೆ-೦೬, ದಾವಣಗೆರೆ-೩, ಶಿವಮೊಗ್ಗ-೨, ಚಿಕ್ಕಮಗಳೂರು ಜಿಲ್ಲೆ-೧ ಹಾಗೂ ೧೧ ಮೋಟಾರ್ ಬೈಕ್‌ಗಳ ಬಗ್ಗೆ ವಿವರಗಳು ಲಭ್ಯವಾಗಬೇಕಿದ್ದು ಒಟ್ಟು ೩೪ ಬೈಕ್‌ಗಳನ್ನು ವಶಪಡಿಸಿಕೊಂಡಿದ್ಧಾರೆ.
ತಲೆಮರಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಚಳ್ಳಕೆರೆ ಪೊಲೀಸರ ಕಾರ್ಯಕ್ಕೆ ಜಿಲ್ಲಾರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ಧಾರೆ.
ನೂತನ ಡಿವೈಎಸ್ಪಿ ಎಂ.ಜೆ.ಸತ್ಯನಾರಾಯಣರಾವ್ ಮಾತನಾಡಿ, ಕಳ್ಳತನವೂ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪೊಲೀಸರು ಪತ್ತೆಹಚ್ಚುವ ಕಾರ್ಯದಲ್ಲಿ ಹೆಚ್ಚು ಜಾಗೃತೆ ವಹಿಸಿದ್ದರೂ ಸಾರ್ವಜನಿಕರು ಕೆಲವೊಮ್ಮೆ ಪೊಲೀಸರ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಪೊಲೀಸ್ ಇಲಾಖೆ ಸದಾಕಾಲ ಸಾರ್ವಜನಿಕರ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಗೆಹೆಚ್ಚು ಸಹಕಾರ ನೀಡಿದಲ್ಲಿ ಪ್ರಕರಣಗಳ ಪತ್ತೆಕಾರ್ಯಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಪಿಎಸ್‌ಐಗಳಾದ ಈರೇಶ್, ಜೆ.ಶಿವರಾಜ್, ಧರೆಪ್ಪ ಬಾಳಪ್ಪ ದೊಡ್ಡಮನಿ, ಎಎಸ್‌ಐ ರಾಘವರೆಡ್ಡಿ, ಮುಖ್ಯಪೇದೆ ಎಚ್.ವಸಂತಕುಮಾರ್, ಎಚ್.ವೆಂಕಟೇಶ್, ಶ್ರೀನಿವಾಸ್, ಶಿವಕುಮಾರ್, ಪೇದೆಗಳಾದ ಮಂಜುನಾಥ, ಪರಶುರಾಮ, ಶ್ರೀಧರ ಧರೆಣ್ಣನವರ್, ರಮೇಶ್ ಬಾರ್ಕಿ, ಅಶೋಕ್ ರೆಡ್ಡಿ, ತಿರುಕಪ್ಪ ತಳವಾರ್, ಬಸವರಾಜ, ಕೊಂಡ್ಲಿ ಮಂಜುನಾಥ ಮುಂತಾದವರು ಶ್ರಮಹಿಸಿದ್ದು ಎಲ್ಲರನ್ನೂ ಜಿಲ್ಲಾರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

